Karnataka Assembly Polls: ಕೊಲೆ ಆರೋಪಿ ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ನೀರಸ ಪ್ರತಿಕ್ರಿಯೆ

|

Updated on: Apr 06, 2023 | 2:23 PM

ಎಫ್ ಐ ಆರ್ ಆದಾಕ್ಷಣ ಯಾರೂ ಆಪರಾಧಿಗಳಾಗಲ್ಲ, ಪ್ರತಿಭಟನೆ ನಡೆಸುವಾಗ ಅನೇಕ ಜನರ ಮೇಲೆ ಎಫ್ ಐಆರ್ ಆಗುತ್ತದೆ, ಅವರನ್ನು ಆಪರಾಧಿಗಳೆಂದು ಪರಿಗಣಿಸಲಾಗದು ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ!

ಹುಬ್ಬಳ್ಳಿ: ಕಾಂಗ್ರೆಸ್ ಧಾರವಾಡ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ಕೊಲೆ ಆರೋಪದಲ್ಲಿ ಜೈಲು ಸೇರಿ ಜಾಮೀನು ಪಡೆದು ಹೊರಬಂದಿರುವ ವಿನಯ್ ಕುಲಕರ್ಣಿಗೆ (Vinay Kulkarni) ನೀಡಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರಿಂದ ತೀಕ್ಷ್ಣ ಪ್ರತಿಕ್ರಿಯೆ ಬರಲಿಲ್ಲ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬೊಮ್ಮಾಯಿ, ಅದು ಕಾಂಗ್ರೆಸ್ ಪಕ್ಷದ (Congress Party) ನಿರ್ಧಾರ, ವೋಟು ಹಾಕುವುದೋ ಬೇಡವೋ ಅಂತ ಜನ ತೀರ್ಮಾನಿಸುತ್ತಾರೆ ಎಂದು ನೀರಸವಾಗಿ ಹೇಳಿದರು. ಅವರು ಅಳೆದು ತೂಗಿ ಪ್ರತಿಕ್ರಿಯಿಸಿರುವುದನ್ನು ಕೇಳುತ್ತಿದ್ದರೆ ಬಿಜೆಪಿಯಲ್ಲೂ ಆರೋಪ ಹೊತ್ತ ಅಬ್ಯರ್ಥಿಗಳಿಗೆ ಟಿಕೆಟ್ ಶಿಫಾರಸ್ಸು ಮಾಡುವ ಹಾಗಿದೆ. ಬೊಮ್ಮಾಯಿಯವರ ಮುಂದಿನ ಮಾತು ಅದರ ಸೂಚನೆ ನೀಡುತ್ತದೆ. ಎಫ್ ಐ ಆರ್ ಆದಾಕ್ಷಣ ಯಾರೂ ಆಪರಾಧಿಗಳಾಗಲ್ಲ, ಪ್ರತಿಭಟನೆ ನಡೆಸುವಾಗ ಅನೇಕ ಜನರ ಮೇಲೆ ಎಫ್ ಐಆರ್ ಆಗುತ್ತದೆ, ಅವರನ್ನು ಆಪರಾಧಿಗಳೆಂದು ಪರಿಗಣಿಸಲಾಗದು ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on