Republic Day Flower Show: ಲಾಲ್ ಬಾಗ್ ನಲ್ಲಿ ಪ್ರದರ್ಶನವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Edited By:

Updated on: Jan 20, 2023 | 12:50 PM

ಮುಖ್ಯಮಂತ್ರಿಗಳು ಲಾಲ್ ಬಾಗ್ ನಲ್ಲಿರುವ ನಂದಿ ಮೇಲೆ ಪುಷ್ಪಾರ್ಚನೆ ಮಾಡಿ ಫ್ಲಾವರ್ ಶೋ ಉದ್ಘಾಟಿಸಿದ ಬಳಿಕ ಮುನಿರತ್ನ ಅವರಿಂದ ಸತ್ಕರಿಸಲ್ಪಟ್ಟರು.

ಬೆಂಗಳೂರು:  ಗಣರಾಜ್ಯೋತ್ಸವದ ಅಂಗವಾಗಿ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ (Lalbagh) ಫಲಪುಷ್ಪ ಪ್ರದರ್ಶನ (Flower Show) ಅರಂಭವಾಗಿದ್ದು ಇದು 10 ದಿನಗಳ ಕಾಲ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಶುಕ್ರವಾರ ಬೆಳಗ್ಗೆ ಪ್ರದರ್ಶನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ನಾಯ್ಡು (Munirathna Naidu) ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು. ಮುಖ್ಯಮಂತ್ರಿಗಳು ಲಾಲ್ ಬಾಗ್ ನಲ್ಲಿರುವ ನಂದಿ ಮೇಲೆ ಪುಷ್ಪಾರ್ಚನೆ ಮಾಡಿ ಫ್ಲಾವರ್ ಶೋ ಉದ್ಘಾಟಿಸಿದ ಬಳಿಕ ಮುನಿರತ್ನ ಅವರಿಂದ ಸತ್ಕರಿಸಲ್ಪಟ್ಟರು. ಬಳಿಕ ಮುಖ್ಯಮಂತ್ರಿಗಳೂ ಮುನಿರತ್ನ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ