ಮತದಾರ ಡಾಟಾ ಕಳುವು ಪ್ರಕರಣದ ರೂವಾರಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ: ಸಿದ್ದರಾಮಯ್ಯ
ಜನರನ್ನು ಗೊಂದಲಕ್ಕೆ ದೂಡಲು ಸರ್ಕಾರ 2017ರಲ್ಲೇ ಈ ಅಕ್ರಮ ನಡೆದಿತ್ತು ಹೇಳುತ್ತಿದೆ, ಹಾಗೆ ನಾವು ಮಾಡಿದ್ದೇಯಾದರೆ 2018ರ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಮತದಾರರ ಡಾಟಾ ಕಳುವು ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರೇ ಕಿಂಗ್ ಪಿನ್ ಎಂದರು. ಮೈಸೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಇದು ಬಹಳ ದೊಡ್ಡಮಟ್ಟದ ವಂಚನೆಯಾಗಿದ್ದು ಮಾನ್ಯ ಉಚ್ಚ ನ್ಯಾಯಾಲಯದ (high court) ಮುಖ್ಯ ನ್ಯಾಯಾಧೀಶರ ಸುಪರ್ದಿಯಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕೆಂದು ಹೇಳಿದರು. ಜನರನ್ನು ಗೊಂದಲಕ್ಕೆ ದೂಡಲು ಸರ್ಕಾರ 2017ರಲ್ಲೇ ಈ ಅಕ್ರಮ ನಡೆದಿತ್ತು ಹೇಳುತ್ತಿದೆ, ಹಾಗೆ ನಾವು ಮಾಡಿದ್ದೇಯಾದರೆ 2018ರ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos