ಉಮೇಶ್ ಕತ್ತಿ ವಿಧಿವಶ: ನಾಳೆ ಜನೋತ್ಸವ ಕಾರ್ಯಕ್ರಮ ನಡೆಯುವುದೇ ಅಂತ ಕೇಳಿದರೆ ಮುಖ್ಯಮಂತ್ರಿಗಳು ನಿರುತ್ತರ!

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 07, 2022 | 3:14 PM

ನಾಳೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ ನಡೆಸಲಾಗುವುದೇ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸದೆ ಧಾವಂತದಲ್ಲಿ ಕಾರು ಹತ್ತಿದರು. ಅವರ ಮೌನವನ್ನು ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕೆಂದು ಅರ್ಥವಾಗದೆ ಮಾಧ್ಯಮದವರು ಗೊಂದಲಕ್ಕೆ ಬಿದ್ದರು.

ಬೆಂಗಳೂರು: ಅಗಲಿದ ನಾಯಕ ಉಮೇಶ್ ಕತ್ತಿ (Umesh Katti) ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ವಿಶೇಷ ವಿಮಾನವೊಂದರಲ್ಲಿ ಹೊರಡಲು ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ನಾಳೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ (Janotsava) ಕಾರ್ಯಕ್ರಮ ನಡೆಸಲಾಗುವುದೇ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸದೆ ಧಾವಂತದಲ್ಲಿ ಕಾರು ಹತ್ತಿದರು. ಅವರ ಮೌನವನ್ನು ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕೆಂದು ಅರ್ಥವಾಗದೆ ಮಾಧ್ಯಮದವರು ಗೊಂದಲಕ್ಕೆ ಬಿದ್ದರು.

Published on: Sep 07, 2022 03:04 PM