‘ಏಯ್… ನನ್ನ ನಿಲುವೇನಿಲ್ಲ’: ಸಚಿವ ತಂಗಡಗಿ ಮೇಲೆ ಸಿಎಂ ಗರಂ

Updated By: ಪ್ರಸನ್ನ ಹೆಗಡೆ

Updated on: Oct 06, 2025 | 2:33 PM

ಮಾಧ್ಯಮಗಳ ಜೊತೆ ಮಾತನಾಡುವೆ ವೇಳೆ ಸಚಿವ ಶಿವರಾಜ ತಂಗಡಗಿ ಮೇಲೆ ಸಿಎಂ ಸಿದ್ದರಾಮಯ್ಯ ಗರಂ ಆದ ಪ್ರಸಂಗ ನಡೆದಿದೆ. ಪ್ರತ್ಯೇಕ ಲಿಂಗಾಯತ ಧರ್ಮ ಕೂಗು ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಯನ್ನ ತಂಗಡಗಿ ಪುನರುಚ್ಛರಿಸಿದ್ದಕ್ಕೆ ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ. ಇದರಲ್ಲಿ ನನ್ನ ನಿಲುವು ಏನೂ ಇಲ್ಲ ಎಂದಿದ್ದಾರೆ.

ಕೊಪ್ಪಳ, ಅಕ್ಟೋಬರ್​ 06: ಸಚಿವ ಶಿವರಾಜ ತಂಗಡಗಿ ಮೇಲೆ ಸಿಎಂ ಸಿದ್ದರಾಮಯ್ಯ (Siddaramaiah) ಗರಂ ಆದ ಪ್ರಸಂಗ ನಡೆದಿದೆ. ಮಾಧ್ಯಮಗಳ ಜೊತೆ ಮುಖ್ಯಮಂತ್ರಿಗಳು ಮಾತನಾಡುವಾಗ ರಾಜ್ಯದಲ್ಲಿ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮ ಕೂಗು ವಿಚಾರ ಪ್ರಸ್ತಾಪವಾಗಿದೆ. ಈ ಬಗ್ಗೆ ನಿಮ್ಮ ನಿಲುವು ಏನು ಎಂದು ವರದಿಗಾರರು ಕೇಳಿದ ಪ್ರಶ್ನೆಯನ್ನ ಸಚಿವ ತಂಗಡಗಿ ಸಿಎಂಗೆ ಪುನರುಚ್ಛರಿಸಿದ್ದಾರೆ. ಈ ವೇಳೆ ಗರಂ ಆದ ಸಿಎಂ ಅದರಲ್ಲಿ ನನ್ನ ನಿಲುವೇನಿಲ್ಲ. ಪ್ರತ್ಯೇಕ ಧರ್ಮದ ಬಗ್ಗೆ ಮುನ್ನೆಲೆ ಇಲ್ಲ, ಹಿನ್ನೆಲೆಯೂ ಇಲ್ಲ. ಕೆಲವು ವಿರಕ್ತ ಸ್ವಾಮೀಜಿಗಳು ಅದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.