ಪತ್ರಕರ್ತರ ಸಮ್ಮೇಳನದಲ್ಲಿ ಮಾಧ್ಯಮದವರಿಗೆ ಸಂತಸ ನೀಡುವ ಘೋಷಣೆಗಳನ್ನು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

|

Updated on: Feb 03, 2024 | 4:56 PM

ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪ್ರಯಾಣ ಸೌಕರ್ಯ ಕಲ್ಪಿಸುವ ಬಗ್ಗೆ ಒಂದು ಚರ್ಚೆ ನಡೆಸಿ ಈ ಬಾರಿಯ ಬಜೆಟ್ ನಲ್ಲಿ ಅವರಿಗೆ ಅನುಕೂಲವಾಗುವ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ಸರ್ಕಾರ ಪತ್ರಕರ್ತರೊಂದಿಗಿದೆ ಎಂದ ಅವರು, ನಿರ್ಭೀತಿ ಮತ್ತು ನಿಷ್ಪಕ್ಷಪಾತವಾಗಿ ವರದಿಗಾರಿಕೆ ಮಾಡುವಂತೆ ಹೇಳಿ, ತಪ್ಪು ತಮ್ಮ ಸರಕಾರವೇ ಮಾಡಿರಲಿ, ಆಥವಾ ವಿರೋಧ ಪಕ್ಷದವರು-ಅದನ್ನು ಯಥಾವತ್ತಾಗಿ ವರದಿ ಮಾಡಲು ಕರೆ ನೀಡಿದರು.

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ದಾವಣಗೆರೆಯಲ್ಲಿಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿದರು. ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ (Shamanur Shivashankarappa Parvathamma Community Hall) ಸಮ್ಮೇಳನವನ್ನು ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಮಾತಾಡಿದ ಸಿದ್ದರಾಮಯ್ಯ ಕಾರ್ಯನಿರತ ಪತ್ರಕರ್ತರಿಗೆ ಸಂತಸ ನೀಡುವ ಕೆಲ ಘೋಷಣೆಗಳನ್ನು ಮಾಡಿದರು. ಪತ್ರಕರ್ತರೊಬ್ಬರು ನಿಧನ ಹೊಂದಿದಾಗ ಸರ್ಕಾರದಿಂದ ಅವರ ಕುಟುಂಬಕ್ಕೆ ನೀಡುತ್ತಿದ್ದ ಮಾಶಾಸನವನ್ನು ಮಾಸಿಕ ರೂ 3,000 ದಿಂದ ರೂ. 6,000 ಗಳಿಗೆ ಹೆಚ್ಚಿಸುವ ಘೋಷಣೆಯನ್ನು ಮುಖ್ಯಮಂತ್ರಿ ಮಾಡಿದರು. ಪತ್ರಕರ್ತರಿಗೆ ಕಾರ್ಮಿಕ ಇಲಾಖೆ ವತಿಯಿಂದ ವಿಮಾ ಸೌಲಭ್ಯವನ್ನು ತಮ್ಮ ಸರ್ಕಾರವೇ ಮಾಡಿದ್ದು ಎಂದ ಅವರು, ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪ್ರಯಾಣ ಸೌಕರ್ಯ ಕಲ್ಪಿಸುವ ಬಗ್ಗೆ ಒಂದು ಚರ್ಚೆ ನಡೆಸಿ ಈ ಬಾರಿಯ ಬಜೆಟ್ ನಲ್ಲಿ ಅವರಿಗೆ ಅನುಕೂಲವಾಗುವ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಸರ್ಕಾರ ಪತ್ರಕರ್ತರೊಂದಿಗಿದೆ ಎಂದ ಅವರು, ನಿರ್ಭೀತಿ ಮತ್ತು ನಿಷ್ಪಕ್ಷಪಾತವಾಗಿ ವರದಿಗಾರಿಕೆ ಮಾಡುವಂತೆ ಹೇಳಿ, ತಪ್ಪು ತಮ್ಮ ಸರಕಾರವೇ ಮಾಡಿರಲಿ, ಆಥವಾ ವಿರೋಧ ಪಕ್ಷದವರು-ಅದನ್ನು ಯಥಾವತ್ತಾಗಿ ವರದಿ ಮಾಡಲು ಕರೆ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ