ಗದಗ: ಗಜೇಂದ್ರಗಡ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲು ಚಾಪರ್ ನಲ್ಲಿ ಬಂದ ಸಿಎಂ ಸಿದ್ದರಾಮಯ್ಯ

|

Updated on: Apr 25, 2024 | 6:00 PM

ಇಂದು ಬೆಳಗ್ಗೆ ಬೀದರ್ ನಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನ ಹಾವೇರಿ ಜಿಲ್ಲೆಯ ತಡಸ ಕ್ರಾಸ್ ಬಳಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು, ಅಲ್ಲಿಂದ ಅವರು ಗಜೇಂದ್ರಗಡಕ್ಕೆ ಬಂದಿದ್ದಾರೆ. ಇಲ್ಲಿಂದ ಅವರು ಪ್ರಾಯಶಃ ಹುಬ್ಬಳ್ಳಿಗೆ ಹೋಗಬಹುದು. ಕಳೆದ ವಾರ ಬರ್ಬರವಾಗಿ ಹತ್ಯೆಯಾದ ನೇಹಾ ಹಿರೇಮಠ ಮನೆಗೆ ಹೋಗಿ ಅಕೆಯ ತಂದೆ ತಾಯಿಯನ್ನು ಮಾತಾಡಿಸುವುದು ನಿಗದಿಯಾಗಿದೆ.

ಗದಗ: ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಫರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ (Anand Swamy Gaddadevarmath) ಪರ ಪ್ರಚಾರ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಶ್ವೇತವರ್ಣದ ಹೆಲಿಕಾಪ್ಟರ್ ವೊಂದರಲ್ಲಿ ಜಿಲ್ಲೆಯ ಗಜೇಂದ್ರಗಡಕ್ಕೆ (Gajendragadh) ಆಗಮಿಸಿದರು. ಪಟ್ಟಣದ ಹೊರವಲಯದ ಕುಷ್ಟಗಿಯ ರಸ್ತೆಯ ಪಕ್ಕ ಸಿದ್ಧಪಡಿಸಲಾಗಿದ್ದ ಹೆಲಿಪ್ಯಾಡ್ ನಲ್ಲಿ ಸಿದ್ದರಾಮಯ್ಯನ್ನು ಹೊತ್ತ ಚಾಪರ್ ಲ್ಯಾಂಡ್ ಆಗುವುದನ್ನು ದೃಶ್ಯಗಳಲ್ಲಿ ನೋಡಬಹುದು. ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಹೆಚ್ ಕೆ ಪಾಟೀಲ್ ಮತ್ತು ನೂರಾರು ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಮುಖ್ಯಮಂತ್ರಿಯವರನ್ನು ಸ್ವಾಗತಿಸಿದರು. ಇಂದು ಬೆಳಗ್ಗೆ ಬೀದರ್ ನಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನ ಹಾವೇರಿ ಜಿಲ್ಲೆಯ ತಡಸ ಕ್ರಾಸ್ ಬಳಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು, ಅಲ್ಲಿಂದ ಅವರು ಗಜೇಂದ್ರಗಡಕ್ಕೆ ಬಂದಿದ್ದಾರೆ. ಇಲ್ಲಿಂದ ಅವರು ಪ್ರಾಯಶಃ ಹುಬ್ಬಳ್ಳಿಗೆ ಹೋಗಬಹುದು. ಕಳೆದ ವಾರ ಬರ್ಬರವಾಗಿ ಹತ್ಯೆಯಾದ ನೇಹಾ ಹಿರೇಮಠ ಮನೆಗೆ ಹೋಗಿ ಅಕೆಯ ತಂದೆ ತಾಯಿಯನ್ನು ಮಾತಾಡಿಸುವುದು ನಿಗದಿಯಾಗಿದೆ. ನಾಳೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಜೆಪಿ ನಾಯಕರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುವ ನೈತಿಕ ಹಕ್ಕಿಲ್ಲ: ಸಿದ್ದರಾಮಯ್ಯ, ಮುಖ್ಯಮಂತ್ರಿ