AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಕೊಟ್ಟ ಪ್ಲ್ಯಾನ್: ಅಂಡಮಾನ್ ಪ್ರವಾಸಕ್ಕೆ ಹೋಗಿದ್ದ ಕರ್ನಾಟಕದ ಮತದಾರರು ಅತಂತ್ರ

ಕೈಕೊಟ್ಟ ಪ್ಲ್ಯಾನ್: ಅಂಡಮಾನ್ ಪ್ರವಾಸಕ್ಕೆ ಹೋಗಿದ್ದ ಕರ್ನಾಟಕದ ಮತದಾರರು ಅತಂತ್ರ

TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Apr 25, 2024 | 5:03 PM

ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ದಿನ ವಾಪಸ್ ಆಗಬೇಕು ಎಂದೇ ಪ್ಲ್ಯಾನ್ ಮಾಡಿಕೊಂಡು ಮೈಸೂರು ಮತ್ತು ಬೆಂಗಳೂರಿಗರು ಅಂಡಮಾನ್ ಪ್ರವಾಸಕ್ಕೆ ಹೋಗಿದ್ದರು. ಆದ್ರೆ, ಅವರ ಪ್ಲ್ಯಾನ್ ಕೈಕೊಟ್ಟಿದ್ದು, ಮತದಾನದಿಂದ ವಂಚಿತವಾಗುವ ಆತಂಕ ವ್ಯಕ್ತಪಡಿಸಿದ್ದಾರೆ.

ಮೈಸೂರು, (ಏಪ್ರಿಲ್ 25): ಕರ್ನಾಟಕದಲ್ಲಿ (Karnataka) ಮೊದಲ ಹಂತದ ಚುನಾವಣೆಯ (Lok sabha Elections 2024) ಮತದಾನ ನಾಳೆ (ಏಪ್ರಿಲ್ 26) ಬೆಳಗ್ಗೆ 7 ಗಂಟೆಯಿಂದ ಆರಂಭವಾಗಲಿದೆ. ಮೊದಲ ಹಂತದಲ್ಲಿ ಒಟ್ಟು 14 ಕ್ಷೇತ್ರಗಳಲ್ಲಿ ಮತದಾನಕ್ಕೆ (Voting) ಚುನಾವಣಾ ಆಯೋಗ ಸಿದ್ಧತೆ (Election Commission) ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ (Bengaluru Rural), ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಮತದಾನ ನಡೆಯಲಿದೆ. ಆದ್ರೆ, ಅಂಡಮಾನ್ ಪ್ರವಾಸಕ್ಕೆ ಹೋಗಿದ್ದ ರಾಜ್ಯದ ಮತದಾರರು ಅತಂತ್ರ ಸಿಲುಕಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ದಿನ ವಾಪಸ್ ಆಗಬೇಕು ಎಂದೇ ಪ್ಲ್ಯಾನ್ ಮಾಡಿಕೊಂಡು ಮೈಸೂರು ಮತ್ತು ಬೆಂಗಳೂರಿಗರು ಅಂಡಮಾನ್ ಪ್ರವಾಸಕ್ಕೆ ಹೋಗಿದ್ದರು. ಆದ್ರೆ, ಅವರ ಪ್ಲ್ಯಾನ್ ಕೈಕೊಟ್ಟಿದೆ. ಹೌದು..ಮೈಸೂರು ಬೆಂಗಳೂರಿನ ನಿವಾಸಿಗಳು ಬುಕ್ ಮಾಡಿದ್ದ ವಿಮಾನ ತಾಂತ್ರಿಕ ಕಾರಣಗಳಿಂದ ರದ್ದಾಗಿದೆ. ಇಂದು ಬದಲಾಗಿ ನಾಳೆ(ಏಪ್ರಿಲ್ 26) ಮಧ್ಯಾಹ್ನಕ್ಕೆ ವಿಮಾನ ಬರುವುದಾಗಿ ಸಂಬಂಧಿಸಿದ ಅಧಿಕಾರಿಗಳು ಹೇಳಿದ್ದಾರೆ. ಆದ್ರೆ, ಬೆಂಗಳೂರು ತಲುಪುವುದು ಸ 5.30 ಆಗುತ್ತೆ. ಇದರಿಂದ ಮತದಾನ ಮಾಡಲು ಆಗುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ನಾಳೆಯೇ ಮತದಾನ ಇರುವುದರಿಂದ ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪರ್ಯಾಯ ವ್ಯವಸ್ಥೆ ಮಾಡುವಂತೆ ಟಿವಿ9 ಮೂಲಕ ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Apr 25, 2024 05:02 PM