ಸಿಎಂ ಕುರ್ಚಿ ಕದನ: ಹೈಕಮಾಂಡ್ ಭೇಟಿ ಬಳಿಕವೂ ಡಿಕೆಶಿಗೆ ಸಿಕ್ಕಿಲ್ವಾ ಸ್ವಷ್ಟ ಚಿತ್ರಣ?
ದೆಹಲಿ ಭೇಟಿಯ ಬಳಿಕವೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರಲ್ಲಿ ಉತ್ಸಾಹ ಕಾಣುತ್ತಿಲ್ಲ. ಹೈಕಮಾಂಡ್‌ನಿಂದ ಯಾವುದೇ ಸ್ಪಷ್ಟ ಸಂದೇಶ ಸಿಗದ ಕಾರಣ ಅವರ ಪಾಳಯ ನಿರೀಕ್ಷೆ ಕಳೆದುಕೊಂಡಿದೆ. ನಾಯಕತ್ವ ಬದಲಾವಣೆ, ಬಜೆಟ್ ಮಂಡನೆ ಕುರಿತ ಅನಿಶ್ಚಿತತೆ ಮುಂದುವರಿದಿದ್ದು, ಡಿಕೆಶಿ ಬೆಂಬಲಿಗರಲ್ಲಿ ಆತಂಕ ಮನೆ ಮಾಡಿದೆ ಎನ್ನಲಾಗಿದೆ.
ಬೆಂಗಳೂರು, ಫೆಬ್ರವರಿ 13: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿ ಪ್ರವಾಸದ ಬಳಿಕವೂ ಅಧಿಕಾರ ಹಸಸ್ತಾಂತರದ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಡಿಕೆಶಿಪಾಳಯವು ಒಂದು ಮಹತ್ವದ ಬೆಳವಣಿಗೆಯ ನಿರೀಕ್ಷೆಯಲ್ಲಿತ್ತು. ಆದರೆ ದೆಹಲಿ ಭೇಟಿಯು ಅಸ್ಸಾಂ ಚುನಾವಣೆ ಚರ್ಚೆಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ ಈ ಬಾರಿಯಾದರೂ ಗುಡ್ ನ್ಯೂಸ್ ಸಿಗುತ್ತದೆ ಎಂದು ಆಶಿಸಿದ್ದ ಬೆಂಬಲಿತ ಶಾಸಕರು ಮತ್ತೆ ನಿರಾಸೆಗೊಂಡಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿರುವುದು, ಅಧಿಕಾರ ಹಂಚಿಕೆ ವಿಚಾರವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಹೀಗಾಗಿ ಬಜೆಟ್ ಮುಂಚಿತವಾಗಿ ಈ ವಿಷಯ ಇತ್ಯರ್ಥವಾಗಬೇಕೆಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇನ್ನು ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಇಂದು ಅಜ್ಜಯ್ಯನ ಮೊರೆ ಹೋಗಲಿದ್ದಾರೆ. ನೊಣವಿನಕೆರೆ ಅಜ್ಯಯ್ಯ ಸನ್ನಿಧಿಗೆ ತೆರಳಲಿರುವ ಡಿಸಿಎಂ, ಜಾತ್ರಾ ಮಹೋತ್ಸವದ ಧರ್ಮಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

