Leelavathi No More: ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಂದ ಸಿದ್ದರಾಮಯ್ಯರ ಪಾದ ಮುಟ್ಟಿ ನಮಸ್ಕರಿಸಿದ ವಿನೋದ್ ರಾಜ್
Leelavati No More: ಲೀಲಾವತಿಯವರ ಪಾರ್ಥೀವ ಶರೀರವನ್ನು ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಬೆಳಗ್ಗೆ 10.30ಕ್ಕೆ ತರಲಾಗಿದೆ. ಮಧ್ಯಾಹ್ನಅ 2.30 ರವರೆಗೆ ಸಾರ್ವಜನಿಕ ಮತ್ತು ಗಣ್ಯರ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದೆಂದು ಬೆಂಗಳೂರು ನಗರ ಜಿಲ್ಲಾಡಳಿತ ಹೇಳಿದೆ. ನಂತರ ಲೀಲಮ್ಮನ ದೇಹವನ್ನು ಅಂತ್ಯಕ್ರಿಯೆಗಾಗಿ ನೆಲಮಂಗಲದ ಸೊಲದೇವನಹಳ್ಳಿಗೆ ತೆಗೆದುಕೊಂಡು ಹೋಗಲಾಗುವುದು.
ಬೆಂಗಳೂರು: ಅಗಲಿದ ಕನ್ನಡದ ಖ್ಯಾತ ನಟಿ ಲೀಲಾವತಿಯವರ ಪಾರ್ಥೀವ ಶರೀರವನ್ನು (mortal remains of Leelavathi) ಸಾರ್ವಜನಿಕರು ಮತ್ತು ಗಣ್ಯರ ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ (Ravindra Kalakshetra) ತಂದಿರಿಸಲಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಂತಿಮ ನಮನ ಸಲ್ಲಿಸಿದರು. ಪಕ್ಷದ ಕೆಲ ಸದಸ್ಯರೊಂದಿಗೆ ನಗರದ ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರಕ್ಕೆ ಅಗಮಿಸಿದ ಸಿದ್ದರಾಮಯ್ಯ ಲೀಲಮ್ಮಗೆ ನಮ್ಮಸ್ಕರಿಸಿದ ಬಳಿಕ ತಮ್ಮನ್ನು ಕಂಡು ಎದ್ದು ಬರುವ ವಿನೋದ್ ರಾಜ್ ರನ್ನು ತಬ್ಬಿಕೊಂಡು ಸಂತೈಸುತ್ತಾರೆ. ತಾಯಿಯನ್ನು ಕಳೆದುಕೊಂಡು ಅಪಾರ ದುಃಖದಲ್ಲಿದ್ದರೂ ವಿನೋದ್, ಸಂಸ್ಕಾರ ಮರೆಯದೆ ಸಿದ್ದರಾಮಯ್ಯರ ಕಾಲು ಮುಟ್ಟಿ ನಮಸ್ಕರಿಸುತ್ತಾರೆ. ಸಿದ್ದರಾಮಯ್ಯ ಅವರಲ್ಲದೆ ರಾಜಕೀಯ, ಸಿನಿಮಾ ಮತ್ತು ಬೇರೆ ಬೇರೆ ಕ್ಷೇತ್ರಗಳ ಗಣ್ಯರು ನಿನ್ನೆ ಸಾಯಂಕಾಲ ನೆಲಮಂಗಲದ ಖಾಸಗಿ ಅಸ್ಪತ್ರೆಯೊಂದರಲ್ಲಿ ನಿಧನಹೊಂದಿದ ಲೀಲಾವತಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಆಗಮಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ