Sign In

By signing in or creating an account, you agree with Associated Broadcasting Company's Terms & Conditions and Privacy Policy.

Leelavathi No More: ಮಮತಾಮಯಿ ಲೀಲಮ್ಮ ತಮ್ಮ ತೋಟದಲ್ಲಿದ್ದ ಚೇಳಿಗೂ ಆಹಾರ ನೀಡಿ ಮಾತಾಡಿಸುತ್ತಿದ್ದರು!

Leelavathi No More: ಮಮತಾಮಯಿ ಲೀಲಮ್ಮ ತಮ್ಮ ತೋಟದಲ್ಲಿದ್ದ ಚೇಳಿಗೂ ಆಹಾರ ನೀಡಿ ಮಾತಾಡಿಸುತ್ತಿದ್ದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 09, 2023 | 11:49 AM

ಲೀಲಮ್ಮನ ಪ್ರೀತಿಯ ನಾಯಿ ಬ್ಲ್ಯಾಕಿ ದಾರಿಯಲ್ಲಿ ಬರುವಾಗ ಸಿಕ್ಕಿದಂತೆ. ಲೀಲಾವತಿ ಯಾವುದೋ ಶೂಟ್ ಮುಗಿಸಿಕೊಂಡು ಮನೆಗೆ ವಾಪಸ್ಸು ಹೋಗುತ್ತಿದ್ದಾಗ ಅಗಿನ್ನೂ ಮರಿಯಾಗಿದ್ದ ಬ್ಲ್ಯಾಕಿ ರಸ್ತೆಯಲ್ಲಿ ಕಾರಿಗೆ ಅಡ್ಡಬಂದಿತ್ತು. ಪ್ರಾಣಿಪ್ರೇಮಿ ಲೀಲಮ್ಮ ಕೂಡಲೇ ಕಾರು ನಿಲ್ಲಿಸಿ ಕೆಳಗಿಳಿದು ನಾಯಿಮರಿಯನ್ನು ಎತ್ತಿಕೊಂಡು ಮನೆಗೆ ಬಂದು ಬ್ಕ್ಯಾಕಿ ಅಂತ ನಾಮಕರಣ ಮಾಡಿ ಸಾಕಿ ಬೆಳೆಸಿದ್ದರು!

ಬೆಂಗಳೂರು: ಅಗಲಿದ ದಕ್ಷಿಣ ಭಾರತದ ಮೇರು ನಟಿ ಅಪ್ಪಟ ಕನ್ನಡತಿ ಲೀಲಾವತಿ (Leelvathi) ಅವರಿಗೆ ಪಶುಪಕ್ಷಿಗಳ ಗಮೇಲೆ ಅದೆಷ್ಟು ಮಮಕಾರ, ಕಾಳಜಿ, ಪ್ರೀತಿ ಇತ್ತು ಅನ್ನೋದು ಪಶುವೈದ್ಯರಾದ ಡಾ ನರಸಿಂಹ ಮೂರ್ತಿ (Dr Narasimha Murthy) ಮತ್ತು ಡಾ ಶ್ವೇತಾ (Dr Shweta) ಅವರ ಮಾತು ಕೇಳಿದರೆ ಗೊತ್ತಾಗುತ್ತದೆ. ಉದಾರ ಮತ್ತು ಪರೋಪಕಾರ ಮನೋಭಾವದ ಜನ ಸಾರ್ವಜನಿಕರಿಗಾಗಿ ಆಸ್ಪತ್ರೆ ಕಟ್ಟಿಸುತ್ತಾರೆ, ಪಶು ಪಕ್ಷಿಗಳಿಗಾಗಿ ಕಟ್ಟಿಸುವವರು ವಿರಳ. ಆದರೆ ಲೀಲಮ್ಮ ಸಾರ್ವನಿಕರಿಗಾಗಿ ಆಸ್ಪತ್ರೆ ಜೊತೆ ಪಶುವೈದ್ಯಕೀಯ ಆಸ್ಪತ್ರೆಯನ್ನೂ ಕಟ್ಟಿಸಿ ಪ್ರಾಣಿಗಳ ಬಗ್ಗೆ ತಮಗಿರುವ ಪ್ರೀತಿಯನ್ನು ತೋರ್ಪಡಿಸಿದ್ದಾರೆ. ಬೆಳಗಿನ ಹೊತ್ತು ಅವರು ತಮ್ಮ ತೋಟದ ಮನೆಯಲ್ಲಿ ಕಾಗೆ, ನವಿಲು, ಅಳಿಲುಗಳಿಗೆ ಕಾಳು ಹಾಕುತ್ತಿದ್ದರಂತೆ. ಇನ್ ಫ್ಯಾಕ್ಟ್, ಕಾಗೆಗಳೇ ಲೀಲಮ್ಮನ ಬೆಡ್ ರೂಂ ಕಿಟಕಿ ಬಳಿ ಬಂದು ಅವರನ್ನು ಎಬ್ಬಿಸುತ್ತಿದ್ದವಂತೆ. ಅವರ ತೋಟದಲ್ಲಿದ್ದ ಚೇಳಿಗೂ ಅವರು ಆಹಾರ ನೀಡುತ್ತಿದ್ದರೆಂದರೆ ಅವರೆಂಥ ದಯಾಮಯಿ ಆಗಿದ್ದರು ಅಂತ ಆರ್ಥಮಾಡಿಕೊಳ್ಳಬಹುದು. ಈ ಪಶುವೈದ್ಯರ ಅಳಲು ಕೊರಗು ಏನೆಂದರೆ, ಪಶು ಆಸ್ಪತ್ರೆ ಕಟ್ಟಿಸಿದ ಕೆಲವೇ ದಿನಗಳ ನಂತರ ಇಹಲೋಕ ಯಾತ್ರೆ ಕೊನೆಗಾಣಿಸಿದ್ದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ