Leelavathi No More: ಅಗಲಿದ ತನ್ನೊಡತಿಯ ಭಾವಚಿತ್ರದ ಎದುರು ಲೀಲಾವತಿ ನೆಚ್ಚಿನ ನಾಯಿ ಬ್ಲ್ಯಾಕಿ ಮೂಕರೋದನೆ!

Leelavathi No More: ಅಗಲಿದ ತನ್ನೊಡತಿಯ ಭಾವಚಿತ್ರದ ಎದುರು ಲೀಲಾವತಿ ನೆಚ್ಚಿನ ನಾಯಿ ಬ್ಲ್ಯಾಕಿ ಮೂಕರೋದನೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 09, 2023 | 10:55 AM

ಶುಕ್ರವಾರ ಸಾಯಂಕಾಲ ನೆಲಮಂಗಲದ ಆಸ್ಪತ್ರೆಯೊಂದರಲ್ಲಿ ವಿಧಿವಶರಾದ ಹಿರಿಯ ನಟಿ, ನಿರ್ಮಾಪಕಿ ಲೀಲಾವತಿಯವರ ಪಾರ್ಥೀವ ಶರೀರವನ್ನು ಸಾರ್ವಕನಿಕೆ ಅಂತಿಮ ದರ್ಶನಕ್ಕಾಗಿ ನೆಲಮಂಗಲ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಇರಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಅವರಿಗೆ ಪುಷ್ಪನಮನ ಸಲ್ಲಿಸಿದೆ ಮತ್ತು ಸಾರ್ವಜನಿಕರು ಹಿಂಡುಗಳಲ್ಲಿ ಬಂದು ಲೀಲಮ್ಮನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ನೆಲಮಂಗಲ: ಈ ಮನೆಯನ್ನು ಈಗ ನೋಡಿದರೆ ವೇದನೆಯಾಗುತ್ತದೆ. ನೆಲಮಂಗಲದ ಬಳಿಯಿರುವ ಸೊಲದೇವನಹಳ್ಳಿಯಲ್ಲಿ ಸುಂದರ ಮನೆಯನ್ನು ಲೀಲಾವತಿ (Leelavathi) ಬಹಳ ಇಷ್ಟಪಟ್ಟು ಕಟ್ಟಿದ್ದರು ಮತ್ತು ತಮ್ಮ ಬದುಕಿನ ಹೆಚ್ಚಿನ ಸಮಯವನ್ನು ಇದೇ ಮನೆಯಲ್ಲಿ ಕಳೆದರು. ಅವರು ಬದುಕಿರುವಾಗ ಮನೆ ಸದಾ ಚಟುವಟಿಕೆಗಳಿಂದ (bustle with activities) ಕೂಡಿರುತಿತ್ತು ಮತ್ತು ಜನರಿಂದ ಗಿಜಿಗಿಡುತಿತ್ತು. ಇವತ್ತು ಮನೆಯಲ್ಲಿ ನೀರವ ಮೌನ. ಲೀಲಾವತಿ ಅಮ್ಮನ ಪ್ರೀತಿಯ ನಾಯಿ ಬ್ಲ್ಯಾಕಿಯನ್ನು (Blacky) ನೋಡಿದರೆ ಇಲ್ಲಿಯ ಸನ್ನಿವೇಶ ಅರ್ಥವಾಗುತ್ತದೆ. ಲೀಲಮ್ಮನಿಗೆ ಪಶುಪಕ್ಷಿಗಳೆಂದರೆ ಬಹಳ ಅಕ್ಕರೆ, ಮಮತೆ. ಹಾಗಾಗೇ ಪ್ರಕೃತಿಯ ಮಡಿಲಲ್ಲಿ ಪ್ರಶಾಂತವಾದ ಪರಿಸರದಲ್ಲಿ ಮನೆ ಕಟ್ಟಿಕೊಂಡಿದ್ದರು. ಮೂಕಪ್ರಾಣಿ ಬ್ಲ್ಯಾಕಿ ಗತಿಸಿದ ತನ್ನ ಒಡತಿಯ ಫೋಟೋವನ್ನು ದೃಷ್ಟಿಸುತ್ತಾ ಮೂಕವಾಗಿ ರೋದಿಸುತ್ತಿದೆ. ನಾಯಿಗಳು ತಮ್ಮ ಯಜಮಾನರನ್ನು ತುಂಬಾ ಹಚ್ಚಿಕೊಂಡು ಬಿಡುತ್ತವೆ ಅಂತ ನಮಗೆ ಗೊತ್ತು, ಬ್ಲ್ಯಾಕಿ ಅದಕ್ಕೆ ಹೊರತಾಗಿಲ್ಲ. ಲೀಲಮ್ಮನ ಆತ್ಮಕ್ಕೆ ಶಾಂತಿ ಸಿಗಲಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ