Leelavathi No More: ಲೀಲಮ್ಮ ಮೂಲತಃ ಕ್ರಿಶ್ಚಿಯನ್, ಅವರ ಹೆಸರು ಲೀನಾ ಸಿಕ್ವೇರಾ ಆಗಿತ್ತು ಅನ್ನುತ್ತಾರೆ ಬೆಳ್ತಂಗಡಿ ಮಹಿಳೆ
ಲೀಲಾವತಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರೆಂದು ಬೆಳ್ತಂಗಡಿಯ ಜನ ಹೇಳುತ್ತಾರೆ, ಅದರೆ ಲೀಲಮ್ಮನಾಗಲಿ ಅಥವಾ ವಿನೋದ್ ರಾಜ್ ಆಗಲೀ ಯಾವತ್ತೂ ಕ್ರಿಶ್ಚಿಯನ್ ಹಿನ್ನೆಲೆಯ ಬಗ್ಗೆ ಹೇಳಿಲ್ಲ ಮತ್ತು ಸಿನಿಮಾಗಳಲ್ಲಿ ಅವರು ಹೆಸರು ಮಾಡಿಲಾರಂಭಿಸಿದ ಬಳಿಕ ಚರ್ಚ್ ಗಳಿಗೆ ಹೋಗುತ್ತಿದ್ದ ಬಗ್ಗೆಯೂ ಉಲ್ಲೇಖವಿಲ್ಲ.
ಮಂಗಳೂರು: ತಮ್ಮ 86ನೇ ವಯಸ್ಸಿನಲ್ಲಿ ವಿಧಿವಶರಾದ ಕನ್ನಡದ ಚಿತ್ರರಂಗದ ಮೇರು ನಟಿ ಲೀಲಾವತಿಯವರ (Leelavathi) ಬಗ್ಗೆ ಕನ್ನಡಿಗರಿಗೆ ಗೊತ್ತಿರದ ಸಂಗತಿಯನ್ನು ಅವರ ಹುಟ್ಟೂರು ಬೆಳ್ತಂಗಡಿಯ (Belthangady) ಜನ ಹೇಳುತ್ತಿದ್ದಾರೆ. ಲೀಲಾವತಿ ಮೂಲತಃ ಕ್ರಿಶ್ಚಿಯನ್ ಸಮುದಾಯಕ್ಕೆ (Christian Community) ಸೇರಿದವರು ಮತ್ತು ಅವರ ತಂದೆತಾಯಿಗಳಿಗೆ ಹೆಣ್ಣುಮಗು ಬೇಡವಾಗಿದ್ದರಿಂದ ಮತ್ತೊಂದು ಕ್ರಿಶ್ಚಿಯನ್ ಕುಟುಂಬ ಅವರ ಪೋಷಣೆ ಮಾಡಿತೆಂದು ಅವರು ಹೇಳುತ್ತಾರೆ. ಬೆಳ್ತಂಗಡಿಯ ಮಿಷನ್ ಶಾಲಯೊಂದರಲ್ಲಿ ಓದಿದ ಲೀಲಾವತಿ ಆರಾಧನೆಗೆಂದು ಅದೇ ಊರಿನ ಕೆಥೊಲಿಕ್ ಚರ್ಚ್ ಗೆ ಹೋಗುತ್ತಿದ್ದರು ಎಂದು ಈ ಮಹಿಳೆ ಹೇಳುತ್ತಾರೆ. ಲೀಲಾವತಿ ಅವರ ಮೂಲನಾಮ ಲೀನಾ ಸಿಕ್ವೇರಾ ಆಗಿತ್ತು ಮತ್ತು ಅವರು ಹಿರಿಯ ಸಹೋದರಿ ಹೆಸರು ಅಂಜಲೀನಾ ಸಿಕ್ವೇರಾ ಆಗಿತ್ತು ಎಂದು ಅವರು ಹೇಳುತ್ತಾರೆ. ಮತ್ತೊಬ್ಬ ಸ್ಥಳೀಯರ ಪ್ರಕಾರ ತುಂಬಾ ಬಡತನಲ್ಲಿ ಬೆಳೆದ ಲೀಲಾವತಿ ಚಿಕ್ಕ ಪ್ರಾಯದವರಾಗಿದ್ದಾಗಲೇ ಚಿಕ್ಕಮ್ಮನೊಂದಿಗೆ ಮೈಸೂರಿಗೆ ಬಂದು ನಾಟಕಗಳಲ್ಲಿ ಕೆಲಸ ಮಾಡತೊಡಗಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ