ಮುಖ್ಯಮಂತ್ರಿ ಕೈ ಮಾಡಲು ಮುಂದಾಗಿರಲಿಲ್ಲ, ಅಧಿಕಾರಿಗೆ ಕೈ ತೋರಿಸಿ ಏನು ಭದ್ರತೆ ಅಂತಷ್ಟೇ ಪ್ರಶ್ನಿಸಿದ್ದು: ಶಿವರಾಜ್ ತಂಗಡಿಗಿ

ಅರುಣ್​ ಕುಮಾರ್​ ಬೆಳ್ಳಿ

Updated on: Apr 29, 2025 | 1:44 PM

ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಮಾಡಿದ್ದು ಸರಿ ಅನ್ನೋದಾದರೆ ನಮ್ಮ ಕಾರ್ಯಕರ್ತರಿಗೂ ಬಿಜೆಪಿ ಸಭೆಗಳಿಗೆ ಹೋಗಿ ಹಾಗೆ ಮಾಡಿ ಎಂದು ಹೇಳುತ್ತೇವೆ ಎಂದು ಸಚಿವ ತಂಗಡಿಗೆ ಹೇಳಿದರು. ಮುಖ್ಯಮಂತ್ರಿಯವರಿಗೆ ಅಪಾರವಾದ ತಾಳ್ಮೆ ಇದೆ, ಆ ಕಾರಣದಿಂದಲೇ ರಾಜ್ಯದ ಬಡ ಜನತೆಗೆ ಸಾಮಾಜಿಕಕ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಹೇಳಿದರು.

ಬಾಗಲಕೋಟೆ, ಏಪ್ರಿಲ್ 29: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿಗಿ ಅವರು ನಿನ್ನೆ ಬೆಳಗಾವಿ ಕಾಂಗ್ರೆಸ್ ಸಭೆಯಲ್ಲಿ ನಡೆದ ಘಟನೆಯನ್ನು ತಮ್ಮದೇ ಆದ ರೀತಿಯಲ್ಲಿ ಸಮರ್ಥಿಸಿಕೊಂಡರು. ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯರು ಮಾಡಿದ್ದು ಸರಿಯಲ್ಲ, ಅವರು ಸಿಎಂ ಸಿದ್ದರಾಮಯ್ಯ  (CM Siddaramaiah) ಭಾಷಣ ಮಾಡುವಾಗ ಕಪ್ಪು ಬಾವುಟ ಪ್ರದರ್ಶಿಸಿದ್ದು ತಪ್ಪು ಎಂದು ಅವರು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನರು ತಾಳ್ಮೆ ಕಳೆದುಕೊಳ್ಳುವ ವ್ಯಕ್ತಿ ಅಲ್ಲ, ಅವರು ಹೆಚ್ಚುವರಿ ಎಸ್ಪಿ ಅವರ ಮೇಲೆ ಕೈ ಮಾಡಲು ಮುಂದಾಗಿರಲಿಲ್ಲ, ತಾನು ವೇದಿಕೆಯ ಮೇಲಿದ್ದೆ ಮತ್ತು ಎಲ್ಲವನ್ನೂ ಕಣ್ಣಾರೆ ಕಂಡಿದ್ದಾಗಿ ಹೇಳುವ ತಂಗಡಿಗಿ, ಮುಖ್ಯಮಂತ್ರಿಯವರು ಯಾಕೆ ಭದ್ರತೆಯಲ್ಲಿ ಲೋಪ ಅಂತ ಕೈ ತೋರಿಸಿ ಅಧಿಕಾರಿಯನ್ನು ಪ್ರಶ್ನಿಸಿದರೇ ಹೊರತು ಕೈ ಮಾಡಲು ಹೋಗಿಲ್ಲ ಎಂದರು.

ಇದನ್ನೂ ಓದಿ:   ಭಾಷಣ ವೇಳೆ ಸಿದ್ದರಾಮಯ್ಯಗೆ ಕಪ್ಪು ಬಟ್ಟೆ ಪ್ರದರ್ಶನ: ಪೊಲೀಸ್ ಅಧಿಕಾರಿಯನ್ನು ವೇದಿಕೆ ಮೇಲೆ ಕರೆದು ಸಿಎಂ ತರಾಟೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.