ಆಲಮಟ್ಟಿ ಜಲಾಶಯದಲ್ಲಿ ಬಾಗಿನ ಅರ್ಪಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ರೈತರ ಆಕ್ರೋಶ ಎದುರಿಸಬೇಕಾಯಿತು

ಆಲಮಟ್ಟಿ ಜಲಾಶಯದಲ್ಲಿ ಬಾಗಿನ ಅರ್ಪಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ರೈತರ ಆಕ್ರೋಶ ಎದುರಿಸಬೇಕಾಯಿತು

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 02, 2023 | 5:19 PM

ಪೊಲೀಸರ ವರ್ತನೆಯಿಂದ ರೊಚ್ಚಗೆದ್ದಿದ್ದ ರೈತರು ಪೊಲೀಸ್, ಸಿದ್ದರಾಮಯ್ಯ ಹಾಗೂ ಇತರ ನಾಯಕರ ವಿರುದ್ಧ ಘೋಚಣೆಗಳನ್ನು ಕೂಗಿದರು. ಸಿದ್ದರಾಮಯ್ಯರೊಂದಿಗಿದ್ದ ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್ ಮತ್ತು ಶಾಸಕ ವಿಜಯಾನಂದ್ ಕಾಶಪ್ಪನವರ್ ವಿರುದ್ಧವೂ ರೈತರು ಕಿಡಿಕಾರಿದರು. ಈ ನಾಯಕರು ಯಾಕೆ ಹಿಂಗಾಡ್ತಾರೋ ಗೊತ್ತಿಲ್ಲ ಮಾರಾಯ್ರೇ. ಅವರಿಂದ ಆಧಿಕಾರಕ್ಕೆ ಬರುತ್ತಾರೆ ನಂತರ ಅವರನ್ನೇ ಕಡೆಗಣಿಸುತ್ತಾರೆ!

ಬಾಗಲಕೋಟೆ: ಇಂದು ಆಲಮಟ್ಟಿ ಜಲಾಶಯದಲ್ಲಿ ಬಾಗಿನ ಅರ್ಪಿಸಲು ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹುನಗುಂದ ಭಾಗದ ರೈತರ (Hungund farmers) ಆಕ್ರೋಶ ಎದುರಿಸಬೇಕಾಯಿತು. ಬಾಗಿನ ಅರ್ಪಿಸಿ, ಆಧಿಕಾರಿಗಳೊಂದಿಗೆ ಸಭೆಯೊಂದನ್ನು ನಡೆಸಿದ ಬಳಿಕ ತಮ್ಮನ್ನು ಕಂಡು ಅಹವಾಲುಗಳನ್ನು ಹೇಳಿಕೊಳ್ಳಲು ಬಂದಿದ್ದ ಜನರಿಂದ ಸಿದ್ದರಾಮಯ್ಯ ಮನವಿ ಪತ್ರಗಳನ್ನು ಸ್ವೀಕರಿಸಿದರು. ಆದರೆ, ಹುನಗುಂದ ತಾಲ್ಲೂಕಿನ ರೈತರನ್ನು ಪೊಲೀಸರು ಬ್ಯಾರಿಕೇಡ್ ಗಳನ್ನು ಅಡ್ಡವಿಟ್ಟು ತಡೆದಿದ್ದರು. ಪೊಲೀಸರ ವರ್ತನೆಯಿಂದ ರೊಚ್ಚಗೆದ್ದಿದ್ದ ರೈತರು ಪೊಲೀಸ್, ಸಿದ್ದರಾಮಯ್ಯ ಹಾಗೂ ಇತರ ನಾಯಕರ ವಿರುದ್ಧ ಘೋಚಣೆಗಳನ್ನು ಕೂಗಿದರು. ಸಿದ್ದರಾಮಯ್ಯರೊಂದಿಗಿದ್ದ ಡಿಕೆ ಶಿವಕುಮಾರ್ (DK Shivakumar) ಮತ್ತು ಎಂಬಿ ಪಾಟೀಲ್ (MB Patil) ಮತ್ತು ಶಾಸಕ ವಿಜಯಾನಂದ್ ಕಾಶಪ್ಪನವರ್ ವಿರುದ್ಧವೂ ರೈತರು ಕಿಡಿಕಾರಿದರು. ಈ ನಾಯಕರು ಯಾಕೆ ಹಿಂಗಾಡ್ತಾರೋ ಗೊತ್ತಿಲ್ಲ ಮಾರಾಯ್ರೇ. ಅವರಿಂದ ಆಧಿಕಾರಕ್ಕೆ ಬರುತ್ತಾರೆ ನಂತರ ಅವರನ್ನೇ ಕಡೆಗಣಿಸುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ