CM Siddaramaiah; ಪ್ರಬುದ್ಧ ಕರ್ನಾಟಕ: ಜನಮನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಕನ್ನಡ ಧ್ವಜವನ್ನು ಎತ್ತಿಹಿಡಿದರು
ಕಾರ್ಯಕ್ರಮ ಆರಂಭಗೊಳ್ಳುವ ಮೊದಲು ಮುಖ್ಯಮಂತ್ರಿ ವೇದಿಕೆಯ ಮೇಲೆ ಕನ್ನಡ ಧ್ವಜವನ್ನು ಎತ್ತಿ ಹಿಡಿದರು.
ಬೆಂಗಳೂರು: ಶನಿವಾರ ಬೆಳಗ್ಗೆ ಕೊಂಚ ಅಸ್ವಸ್ಥರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸಾಯಂಕಾರ ಹೊತ್ತಿಗೆ ಚೇತರಿಸಿಕೊಂಡಿದ್ದರು. ಬೆಂಗಳೂರು ನಗರದ ಜನಮನ ಪ್ರತಿಷ್ಠಾನ ಮತ್ತು ಮೈಸೂರಿನ ಸಮತಾ ಅಧ್ಯಯನ ಕೇಂದ್ರ ಜಂಟಿಯಾಗಿ ದಿವಂಗತ ಡಿ ದೇವರಾಜ ಅರಸು ಭವನದಲ್ಲಿ (Devaraj Urs Bhavan) ಆಯೋಜಿಸಿದ್ದ ಪ್ರಬುದ್ಧ ಕರ್ನಾಟಕ: ಜನಮನ ಸಂವಾದ (interaction) ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಮುಖ್ಯಮಂತ್ರಿಗಳೊಂದಿಗೆ ಸಂವಾದ ಏರ್ಪಡಿಸಲಾಗಿತ್ತು. ಸಾಹಿತ್ಯ ಸಂಸ್ಕೃತಿ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಥ ಕಾರ್ಯಕ್ರಮಗಳಲ್ಲಿ ಭಾರೀ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಾರೆ. ಕಾರ್ಯಕ್ರಮ ಆರಂಭಗೊಳ್ಳುವ ಮೊದಲು ಮುಖ್ಯಮಂತ್ರಿ ವೇದಿಕೆಯ ಮೇಲೆ ಕನ್ನಡ ಧ್ವಜವನ್ನು ಎತ್ತಿ ಹಿಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos