Budget Session: ಮಧ್ಯೆ ಮಧ್ಯೆ ಎದ್ದು ನಿಂತು ಮಾತಾಡಿದರೂ ನೀವು ವಿರೋಧ ಪಕ್ಷದ ನಾಯಕನಾಗಲ್ಲ; ಬಸನಗೌಡ ಯತ್ನಾಳ್ರನ್ನು ಛೇಡಿಸಿದ ಸಿದ್ದರಾಮಯ್ಯ
ಅಧಿವೇಶನ ಶುರುವಾಗಿ ಮೂರು ದಿನವಾದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳುವುದು ನಿಮ್ಮಿಂದಾಗಲಿಲ್ಲ ಎಂದು ಸಿದ್ದರಾಮಯ್ಯ ಛೇಡಿಸುತ್ತಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ಮಾತೇ ಹಾಗೆ ಮಾರಾಯ್ರೇ. ಏಕ್ ಮಾರ್ ದೋ ತುಕಡಾ ಅನ್ನುತ್ತಾರಲ್ಲ ಹಾಗೆ! ಈ ವಿಡಿಯೋ ನೋಡಿ, ಪ್ರಚಂಡ ಮಾತುಗಾರ ಮತ್ತು ಎದುರಾಳಿಗಳು ಯಾರೇ ಇರಲಿ, ಸುಮ್ಮನಾಗುವಂತೆ ಮಾತಾಡುವ ಸಾಮರ್ಥ್ಯದ ಬಿಜೆಪಿಯ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರನ್ನೂ ಸಿದ್ದರಾಮಯ್ಯ ಮೌನವಾಗಿಸುತ್ತಾರೆ! ಮುಖ್ಯಮಂತ್ರಿ ಪ್ರಶ್ನೆಯೊಂದಕ್ಕೆ ಉತ್ತರಿಸಲು ಎದ್ದುನಿಂತಾಗ ಯತ್ನಾಳ್ ಏನನ್ನೋ ಹೇಳಬಯಸುತ್ತಾರೆ. ಅವರು ಉತ್ತರಿಸುವಾಗ ನೀವ್ಯಾಕೆ ಮಾತಾಡೋದು ಅಂತ ಸ್ಪೀಕರ್ ಕೇಳುತ್ತಾರೆ. ಆಗ ಸಿದ್ದರಾಮಯ್ಯ, ‘ಯತ್ನಾಳ್ ಅವರೇ ಯಾಕಿಷ್ಟು ಆತುರ ನಿಮಗೆ? ನಿಮ್ಮನ್ನು ಲೀಡರ್ ಆಫ್ ದಿ ಅಪೋಸಿಷನ್ (Leader of the Opposition) ಮಾಡ್ತಾರೋ ಇಲ್ವೋ ಗೊತ್ತಿಲ್ಲ ನಂಗೆ; ನೀವು ಹೀಗೆ ಮಧ್ಯೆ ಮಧ್ಯೆ ಮಾತಾಡಿದರೆ ಬಿಜೆಪಿ ನಾಯಕರು ನಿಮ್ಮನ್ನು ಆಯ್ಕೆ ಮಾಡುತ್ತಾರೆ ಅಂದಿಕೊಂಡಿದ್ದೀರಾ?’ ಅಂದಾಗ ಖುದ್ದು ಯತ್ನಾಳ್ ಪ್ಯಾಲಿ ನಗೆ ಬೀರುತ್ತಾರೆ. ಮುಂದುವರಿದು ಮಾತಾಡುವ ಮುಖ್ಯಮಂತ್ರಿ ಅಧಿವೇಶನ ಶುರುವಾಗಿ ಮೂರು ದಿನವಾದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳುವುದು ನಿಮ್ಮಿಂದಾಗಲಿಲ್ಲ ಎಂದು ಛೇಡಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ