ಸಿದ್ದರಾಮಯ್ಯ ತಿಲಕವಿಡುತ್ತಾರೆ, ಆದರೆ ಮಹಿಳೆಯರ ಹಾಗೆ ಹಣೆಯಲ್ಲಿ ದೊಡ್ಡದಾಗಿ ಬೊಟ್ಟಿಡಲ್ಲ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ

Updated on: Feb 03, 2024 | 1:33 PM

ತನಗೆ ಸೌಗಂದಧಿಕ ರಾಜ ಪುಷ್ಪದ ಅಲರ್ಜಿ ಇದೆ, ಆ ಹೂವಿರುವ ಹಾರವನ್ನು ಹಾಕಲೇಕೂಡದು ಅಂತ ಸ್ಪಷ್ಟಪಡಿಸಿದ್ದೇನೆ ಎಂದ ಅವರು, ಇಂಥ ಪ್ರಶ್ನೆಗಳನ್ನು ಎಲ್ಲಿಂದ ಹೆಕ್ಕಿ ತರುತ್ತೀರಿ? ಕೆಲಸಗಳ ಬಗ್ಗೆ, ಹೊಟ್ಟೆಪಾಡಿನ ಬಗ್ಗೆ ಪ್ರಶ್ನೆ ಕೇಳಿ ಅಂತ ತಾಕೀತು ಮಾಡಿದರು.  

ಕಲಬುರಗಿ: ಡಿಕೆ ಶಿವಕುಮಾರ್ (DK Shivakumar) ಅವರು  ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (CM Siddaramaiah) ಯಾವತ್ತೂ ಬಿಟ್ಟುಕೊಡಲ್ಲ, ಇದೇ ಮಾತು ಸಿದ್ದರಾಮಯ್ಯಗೂ ಅನ್ವಯಿಸುತ್ತದೆ. ಅವರಿಬ್ಬರ ನಡುವೆ ಸೌಹಾರ್ದತೆ, ಆತ್ಮೀಯತೆ, ಸ್ನೇಹದ ಕೊರತೆಯಿದೆ ಅಂತ ಹೇಳೋದು ಸಾಧ್ಯವಿಲ್ಲ. ಇಂದು ಕಲಬುರಗಿಯಲ್ಲಿ (Kalaburagi) ಮಾಧ್ಯಮ ಪ್ರತಿನಿಧಿಗಳು, ಸಿದ್ದರಾಮಯ್ಯ ಆರತಿ ಬೆಳಗಿಸಿಕೊಳ್ಳುತ್ತಾರೆ ಆದರೆ ತಿಲಕ ಇಟ್ಟುಕೊಳ್ಳಲು ನಿತನಗೆ ಸೌಗಂದಧಿಕ ರಾಜ ಪುಷ್ಪದ ಅಲರ್ಜಿ ಇದೆ, ಆ ಹೂವಿರುವ ಹಾರವನ್ನು ಹಾಕಲೇಕೂಡದು ಅಂತ ಸ್ಪಷ್ಟಪಡಿಸಿದ್ದೇನೆ ಎಂದ ಅವರು, ಇಂಥ ಪ್ರಶ್ನೆಗಳನ್ನು ಎಲ್ಲಿಂದ ಹೆಕ್ಕಿ ತರುತ್ತೀರಿ? ಕೆಲಸಗಳ ಬಗ್ಗೆ, ಹೊಟ್ಟೆಪಾಡಿನ ಬಗ್ಗೆ ಪ್ರಶ್ನೆ ಕೇಳಿ ಅಂತ ತಾಕೀತು ಮಾಡಿದರು.  ರಾಕರಿಸುತ್ತಾರಲ್ಲ ಅಂತ ಕೇಳಿದಾಗ ಉಪ ಮುಖ್ಯಮಂತ್ರ ಕೂಡಲೇ ಸಿಡುಕಿದರು. ಅವರು ಯಾವತ್ತೂ ತಿಲಕವಿಟ್ಟುಕೊಳ್ಳಲು ನಿರಾಕರಿಸಿಲ್ಲ, ಹಾಗಂತ ಮಹಿಳೆಯರ ಹಾಗೆ ಅವರು ಹಣೆತುಂಬ ಕುಂಕುಮ ಹಚ್ಚಿಕೊಳ್ಳಲ್ಲ. ಅವರು ತಿಲಕವಿಡಲ್ಲ ಅಂತ ಯಾರು ಹೇಳಿದ್ದು? ಕೆಲ ಸಂದರ್ಭಗಳಲ್ಲಿ ಅಲರ್ಜಿಯ ಕಾರಣ ತಿಲಕವಿಡಲು ನಿರಾಕರಿಸಿರಬಹುದು ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.