ಡಿಕೆ ಶಿವಕುಮಾರ್ ಎಚ್ಚರಿಕೆ ಹೊರತಾಗಿಯೂ ಪಕ್ಷ ವಿರೋಧಿ ಹೇಳಿಕೆ ನೀಡುವುದನ್ನು ಮುಂದುವರಿಸಿದ ಬಿ ಶಿವರಾಂ

ಡಿಕೆ ಶಿವಕುಮಾರ್ ಎಚ್ಚರಿಕೆ ಹೊರತಾಗಿಯೂ ಪಕ್ಷ ವಿರೋಧಿ ಹೇಳಿಕೆ ನೀಡುವುದನ್ನು ಮುಂದುವರಿಸಿದ ಬಿ ಶಿವರಾಂ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 02, 2024 | 2:49 PM

ಪ್ರಸ್ತುತವಾಗಿ ವರ್ಗಾವಣೆ ದಂಧೆ ನಡೆಯುತ್ತಿದೆ, ಇದರಲ್ಲಿ ಸಣ್ಣ ಪುಟ್ಟ ವ್ಯವಹಾರಗಳು ನಡೆಯುತ್ತಿರಬಹುದು ಎಂದು ಶಿವರಾಂ ಹೇಳಿದರು. ಹೆಚ್ ಡಿ ದೇವೇಗೌಡ ಕುಟುಂಬ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ನಮ್ಮ ಪಕ್ಷವನ್ನು ಸಂಘಟಿಸಲು ನಾಯಕರು ಮುಂದಾಗಬೇಕೆನ್ನುವ ಕಾರಣಕ್ಕೆ ಈ ಮಾತುಗಳನ್ನು ಹೇಳುತ್ತಿರುವುದಾಗಿ ಶಿವರಾಂ ಹೇಳಿದರು.

ಬೆಂಗಳೂರು: ಕಾಂಗ್ರೆಸ್ ನಾಯಕರಿಗೆ ಸುದ್ದಿಯಲ್ಲಿರುವ ಹಪಾಹಪಿ ಶುರುವಾದಂತಿದೆ. ಸಂಸದ ಡಿಕೆ ಸುರೇಶ್ (DK Suresh) ನಿನ್ನೆ ಪ್ರತ್ಯೇಕ ದಕ್ಷಿಣ ಭಾರತ ದೇಶದ ಬಗ್ಗೆ ಮಾತಾಡಿ ಖಂಡನೆಗೊಳಗಾಗಿದ್ದಾರೆ. ಕರ್ನಾಟಕದ ಇನ್ನೊಬ್ಬ ಧುರೀಣ ಮತ್ತು ಮಾಜಿ ಸಚಿವ ಬಿ ಶಿವರಾಂ (B Shivaram) ಸಹ ನಿನ್ನೆಯಿಂದ ತಮ್ಮ ಪಕ್ಷ ಮತ್ತು ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಹೆಡ್ ಲೈನ್ ಗಳಲ್ಲಿ ಕಾಣಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಮಾತಿನ ಮೇಲೆ ನಿಗಾ ಇರಲಿ, ನಾಲಗೆ ಮೇಲೆ ಕಡಿವಾಣವಿರಲಿ ಎಂದು ಕೆಪಿಸಿಸಿ ಡಿಕೆ ಶಿವಕುಮಾರ್ (DK Shivakumar) ಅವರಿಂದ ಎಚ್ಚರಿಕೆಗೊಳಗಾದರೂ ಶಿವರಾಂ ತಮ್ಮ ಚಾಳಿ ಮುಂದುವರಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧುಗಳೊಂದಿಗೆ ಮಾತಾಡಿದ ಶಿವರಾಂ, ಪರ್ಸೆಂಟೇಜ್ ವಿಷಯ ಬಿಜೆಪಿ ಸರಕಾರದ ಅವಧಿಯಲ್ಲಿ ಶುರುವಾಗಿದ್ದು, ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮೀಶನ್ ಪಡೆಯಲಾಗುತ್ತಿದೆ ಅಂತ ಆರೋಪಗಳನ್ನು ಮಾಡಿ ತಮ್ಮ ಪಕ್ಷ ಗೆಲುವು ಸಾಧಿಸಿತು ಅಂತ ಹೇಳಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ, ಅವು ಆರಂಭಗೊಂಡ ಮೇಲೆ ಪರ್ಸೆಂಟೇಜ್ ವ್ಯವಹಾರ ಶುರುವಾಗಬಹುದು, ಗುತ್ತಿಗೆ ನೀಡುವಾಗ 10 ಪರ್ಸೆಂಟ್, ಬಿಲ್ ರಿಲೀಸ್ ಮಾಡಲು ಒಂದಷ್ಟು ಪರ್ಸೆಂಟ್-ಇದೆಲ್ಲ ನಡೆಯುತ್ತಿರುತ್ತದೆ ಎಂದರು.

ಪ್ರಸ್ತುತವಾಗಿ ವರ್ಗಾವಣೆ ದಂಧೆ ನಡೆಯುತ್ತಿದೆ, ಇದರಲ್ಲಿ ಸಣ್ಣ ಪುಟ್ಟ ವ್ಯವಹಾರಗಳು ನಡೆಯುತ್ತಿರಬಹುದು ಎಂದು ಶಿವರಾಂ ಹೇಳಿದರು. ಹೆಚ್ ಡಿ ದೇವೇಗೌಡ ಕುಟುಂಬ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ನಮ್ಮ ಪಕ್ಷವನ್ನು ಸಂಘಟಿಸಲು ನಾಯಕರು ಮುಂದಾಗಬೇಕೆನ್ನುವ ಕಾರಣಕ್ಕೆ ಈ ಮಾತುಗಳನ್ನು ಹೇಳುತ್ತಿರುವುದಾಗಿ ಶಿವರಾಂ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ