ಸುರೇಶ್ ಹೇಳಿದ್ದರ ಜೊತೆಗೆ ಸಂವಿಧಾನ ಬದಲಾವಣೆ ಮಾಡುತ್ತೇವೆಂದವರ ಬಗ್ಗೆಯೂ ಚರ್ಚೆಯಾಗಬೇಕು; ಸಂತೋಷ್ ಲಾಡ್, ಸಚಿವ
ದಕ್ಷಿಣದ ರಾಜ್ಯಗಳಿಂದ ಸಂಗ್ರಹವಾಗುವ ತೆರಿಗೆ ಹಣದಲ್ಲಿ ಹೆಚ್ಚಿನ ಪಾಲನ್ನು ಉತ್ತರದ ರಾಜ್ಯಗಳಿಗೆ ಹಂಚುವುದು ಯಾವ ನ್ಯಾಯ? 2014 ರಿಂದ ಈ ತಾರತಮ್ಯ ಜರುಗುತ್ತಿದೆ ಅಂತ ಸುರೇಶ್ ಹೇಳಿರುವುದರಲ್ಲಿ ತಪ್ಪೇನಿದೆ? ಅವರು ಎತ್ತಿರುವ ಪ್ರಶ್ನೆಯನ್ನು ಸಮರ್ಥಿಸುತ್ತೇನೆ ಎಂದು ಸಂತೋಷ್ ಲಾಡ್ ಹೇಳಿದರು.
ಹುಬ್ಬಳ್ಳಿ: ನಗರದಲ್ಲಿಂದು ಮಾಧ್ಯಮ ಗೋಷ್ಟಿ ಉದ್ದೇಶಿಸಿ ಮಾತಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad), ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರದ ಬಗ್ಗೆ ಸಂಸದ ಡಿಕೆ ಸುರೇಶ್ (DK Suresh) ಮಾತಾಡಿರುವುದು ಅವರ ಅಭಿಪ್ರಾಯ ಮಾತ್ರ, ಆದರೆ ಅನುದಾನ (grants) ವಿಚಾರದಲ್ಲಿ ಅವರು ಹೇಳಿರುವುದನ್ನು ಸಮರ್ಥಿಸುವುದಾಗಿ ಹೇಳಿದರು. ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಬಿಡುಗಡೆಯಾಗುವ ಅನುದಾನಗಳಲ್ಲಿ ಜರುಗುತ್ತಿರುವ ತಾರತಮ್ಯದ ಬಗ್ಗೆ ಸುರೇಶ್ ವಾಸ್ತವ ಸಂಗತಿಯನ್ನು ಹೇಳಿದ್ದಾರೆ. ದಕ್ಷಿಣದ ರಾಜ್ಯಗಳಿಂದ ಸಂಗ್ರಹವಾಗುವ ತೆರಿಗೆ ಹಣದಲ್ಲಿ ಹೆಚ್ಚಿನ ಪಾಲನ್ನು ಉತ್ತರದ ರಾಜ್ಯಗಳಿಗೆ ಹಂಚುವುದು ಯಾವ ನ್ಯಾಯ? 2014 ರಿಂದ ಈ ತಾರತಮ್ಯ ಜರುಗುತ್ತಿದೆ ಅಂತ ಸುರೇಶ್ ಹೇಳಿರುವುದರಲ್ಲಿ ತಪ್ಪೇನಿದೆ? ಅವರು ಎತ್ತಿರುವ ಪ್ರಶ್ನೆಯನ್ನು ಸಮರ್ಥಿಸುತ್ತೇನೆ ಎಂದು ಸಂತೋಷ್ ಲಾಡ್ ಹೇಳಿದರು.
ಪ್ರತ್ಯೇಕ ದಕ್ಷಿಣ ಭಾರತದ ಬಗ್ಗೆ ಸಂಸದ ಹೇಳಿದ್ದನ್ನು ಪುನಃ ಅವರ ಗಮನಕ್ಕೆ ತಂದಾಗ, ಅದನ್ನು ಅವರಿಗೆ ಕೇಳಬೇಕು ಎಂದರು. ದಿನಬೆಳಗಾದರೆ ಸಂವಿಧಾನ ಬದಲಾಯಿಸುತ್ತೇವೆ ಅಂತ ಹೇಳುವವರ ಬಗ್ಗೆ ಯಾಕೆ ಪ್ರಶ್ನೆ ಏಳಲ್ಲ, ಸುರೇಶ್ ಹೇಳಿದ್ದು ಚರ್ಚೆಯ ವಿಷಯವಾದರೆ ಡಾ ಭೀಮರಾವ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎನ್ನುವ ವಿಷಯದ ಬಗ್ಗೆ ಸಹ ಚರ್ಚೆ ಅಗಬೇಕು ಎಂದು ಸಚಿವ ಲಾಡ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ