‘ರಿಯಾಲಿಟಿ ಶೋಗೆ ಬಂದು ನೀನು ಇಷ್ಟ ಅಂದ್ರೆ ನಂಬುವಷ್ಟು ದಡ್ಡಿ ನಾನಲ್ಲ’; ನಮ್ರತಾ ಗೌಡ

‘ರಿಯಾಲಿಟಿ ಶೋಗೆ ಬಂದು ನೀನು ಇಷ್ಟ ಅಂದ್ರೆ ನಂಬುವಷ್ಟು ದಡ್ಡಿ ನಾನಲ್ಲ’; ನಮ್ರತಾ ಗೌಡ

ರಾಜೇಶ್ ದುಗ್ಗುಮನೆ
|

Updated on:Feb 02, 2024 | 11:31 AM

ನಮ್ರತಾ ಕಿರುತೆರೆ ಮೂಲಕ ಫೇಮಸ್ ಆದವರು. ‘ಬಿಗ್ ಬಾಸ್’ಗೆ ಕಾಲಿಟ್ಟು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರಿಗೆ ಸ್ನೇಹಿತ್ ಗೌಡ ಸಾಕಷ್ಟು ಬಾರಿ ಪ್ರಪೋಸ್ ಮಾಡಿದ್ದರು. ಆದರೆ ಇದನ್ನು ನಮ್ರತಾ ಗಂಭೀರವಾಗಿ ಪರಿಗಣಿಸಿಲ್ಲ. ಈಗ ಈ ಬಗ್ಗೆ ನಮ್ರತಾ ಗೌಡ ಅವರು ಪರೋಕ್ಷವಾಗಿ ಮಾತನಾಡಿದ್ದಾರೆ.

ನಮ್ರತಾ ಗೌಡ ಅವರು ಇತ್ತೀಚೆಗೆ ‘ಬಿಗ್ ಬಾಸ್’ಗೆ ಕಾಲಿಟ್ಟು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತ್ ಗೌಡ ಸಾಕಷ್ಟು ಬಾರಿ ಪ್ರಪೋಸ್ ಮಾಡಿದ್ದರು. ಆದರೆ ಇದನ್ನು ನಮ್ರತಾ ಗಂಭೀರವಾಗಿ ಪರಿಗಣಿಸಿಲ್ಲ. ಈಗ ಅವರು ಬಿಗ್ ಬಾಸ್​ನಿಂದ ಹೊರ ಬಂದಿದ್ದಾರೆ. ಅವರಿಗೆ ಮದುವೆ ಬಗ್ಗೆ ಪ್ರಶ್ನೆಗಳು ಎದುರಾಗಿವೆ. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ಮದುವೆ ಮೇಲೆ ನಂಬಿಕೆ ಹೋಗಿದೆ. ಮುಂದೆ ಯಾರಾದರೂ ಒಳ್ಳೆಯ ಹುಡುಗ ಸಿಕ್ಕರೆ ಆ ಬಗ್ಗೆ ಆಲೋಚಿಸುತ್ತೇನೆ. ರಿಯಾಲಿಟಿ ಶೋನಲ್ಲಿ ಬಂದು ನೀನು ಇಷ್ಟ ಎಂದಾಗ ನಾನು ಅದನ್ನು ನಂಬಿಕೊಂಡು ಅವರ ಜೊತೆ ಜೀವನ ಕಟ್ಟಿಕೊಳ್ಳುವಷ್ಟು ದಡ್ಡಿ ನಾನಲ್ಲ. ನಾನು ಜೀವನದಲ್ಲಿ ಸಾಕಷ್ಟು ನೋಡಿದ್ದೇನೆ. ಮದುವೆ ಬಗ್ಗೆ ನಂಬಿಕೆ ತರಿಸುವವರು ಬರಬೇಕು’ ಎಂದಿದ್ದಾರೆ ನಮ್ರತಾ ಗೌಡ. ಆದರೆ, ಎಲ್ಲಿಯೂ ಅವರು ಸ್ನೇಹಿತ್ ಹೆಸರನ್ನು ಹೇಳಿಲ್ಲ.

Published on: Feb 02, 2024 11:31 AM