ಐಎಸ್​ಟಿಆರ್​ಎಸಿ ಕೇಂದ್ರಕ್ಕೆ ಭೇಟಿ ನೀಡಿ ಇಸ್ರೋ ಚೇರ್ಮನ್ ಎಸ್ ಸೋಮನಾಥ ಮತ್ತು ಟೀಮನ್ನು ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

|

Updated on: Aug 24, 2023 | 1:59 PM

ಮುಖ್ಯಮಂತ್ರಿ, ವಿಜ್ಞಾನಿಗಳು ಹಾಗೂ ಬೇರೆ ಸಿಬ್ಬಂದಿಯೊಂದಿಗೆ ಆತ್ಮೀಯವಾಗಿ ಹರಟಿದರು. ವಿಜ್ಞಾನಿಗಳಲ್ಲೊಬ್ಬರು ಕನ್ನಡತಿ ಅಂತ ಗೊತ್ತಾದಾಗ ಅವರ ತಲೆ ನೇವರಿಸಿ ಆಶೀರ್ವದಿಸಿದರು. ಒಬ್ಬ ಹಿರಿಯ ವಿಜ್ಞಾನಿ ಚಂದ್ರಯಾನ-3 ಲ್ಯಾಂಡಿಂಗ್ ಪ್ರಕ್ರಿಯೆಯನ್ನು ವಿವರಿಸುವಾಗ ಮುಖ್ಯಮಂತ್ರಿ ಪ್ರಶ್ನೆಯೊಂದನ್ನು ಕೇಳುತ್ತಾರೆ. ಅವರ ಪ್ರಶ್ನೆಯಿಂದ ಅವಾಕ್ಕಾಗುವ ವಿಜ್ಞಾನಿ ಒಂದರೆಕ್ಷಣ ಬಳಿಕ ಸಾವರಿಸಿಕೊಂಡು ಉತ್ತರ ನೀಡುತ್ತಾರೆ.

ಬೆಂಗಳೂರು: ಬುಧವಾರ ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಸೇಫಾಗಿ ಲ್ಯಾಂಡ್ ಮಾಡಿಸಿದ ಭಾರತೀಯ ಬ್ಯಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ದೇಶವನ್ನು ಸಂತಸದಿಂದ ಬೀಗುವಂತೆ ಮಾಡಿದ್ದಾರೆ. ದೇಶದ ಗಣ್ಯರೆಲ್ಲ ಅವರನ್ನು ಅಭಿನಂದಿಸುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ನಗರದ ಪೀಣ್ಯದಲ್ಲಿರುವ ಐಎಸ್​ಟಿಆರ್​ಎಸಿ ಕೇಂದ್ರಕ್ಕೆ (ISRO Telemetry Tracking and Command Network) ಭೇಟಿ ನೀಡಿ ಭಾರತದ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದು ಚಂದ್ರನ ಮೇಲೆ ಹಾರಿಸಿದ ವಿಜ್ಞಾನಿಗಳನ್ನು ಅಭಿನಂದಿಸಿದರು. ಇಸ್ರೋ ಚೇರ್ಮನ್ ಎಸ್ ಸೋಮನಾಥ್ (ISRO chairman S Somanath) ಮತ್ತು ಬೇರೆ ಕೆಲ ಹಿರಿಯ ವಿಜ್ಞಾನಿಗಳನ್ನು ಸತ್ಕರಿಸಿದರು. ಬಳಿಕ ಮುಖ್ಯಮಂತ್ರಿ, ವಿಜ್ಞಾನಿಗಳು ಹಾಗೂ ಬೇರೆ ಸಿಬ್ಬಂದಿಯೊಂದಿಗೆ ಆತ್ಮೀಯವಾಗಿ ಹರಟಿದರು. ವಿಜ್ಞಾನಿಗಳಲ್ಲೊಬ್ಬರು ಕನ್ನಡತಿ (Kannadiga) ಅಂತ ಗೊತ್ತಾದಾಗ ಅವರ ತಲೆ ನೇವರಿಸಿ ಆಶೀರ್ವದಿಸಿದರು. ಒಬ್ಬ ಹಿರಿಯ ವಿಜ್ಞಾನಿ ಚಂದ್ರಯಾನ-3 ಲ್ಯಾಂಡಿಂಗ್ ಪ್ರಕ್ರಿಯೆಯನ್ನು ವಿವರಿಸುವಾಗ ಮುಖ್ಯಮಂತ್ರಿ ಪ್ರಶ್ನೆಯೊಂದನ್ನು ಕೇಳುತ್ತಾರೆ. ಅವರ ಪ್ರಶ್ನೆಯಿಂದ ಅವಾಕ್ಕಾಗುವ ವಿಜ್ಞಾನಿ ಒಂದರೆಕ್ಷಣ ಬಳಿಕ ಸಾವರಿಸಿಕೊಂಡು ಉತ್ತರ ನೀಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ