ಆಯನೂರು ಮಂಜುನಾಥ ಸೇಪರ್ಡೆಯೊಂದಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ಅಭ್ಯರ್ಥಿ ಸಿಕ್ಕಂತೆಯೇ?

ಆಯನೂರು ಮಂಜುನಾಥ ಸೇಪರ್ಡೆಯೊಂದಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ಅಭ್ಯರ್ಥಿ ಸಿಕ್ಕಂತೆಯೇ?

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 24, 2023 | 12:54 PM

ಕಾಂಗ್ರೆಸ್ ನಾಯಕರನ್ನು ಹಿಗ್ಗಾ ಮುಗ್ಗಾ ಟೀಕಿಸುತ್ತಿದ್ದ ಮಂಜುನಾಥ್ ಅದರ ತೆಕ್ಕೆಗೆ ಬಿದ್ದಿದ್ದು ಆಶ್ಚರ್ಯ ಹುಟ್ಟಿಸೋದು ನಿಜವಾದರೂ, ರಾಜಕಾರಣದಲ್ಲಿ ಯಾರೂ ಮಿತ್ರರಲ್ಲ, ಶತ್ರುಗಳೂ ಅಲ್ಲ ಅನ್ನೋ ಮಾತು ನೆನಪಿಗೆ ಬರುತ್ತದೆ. ಕೆಪಿಸಿಸಿ ಕಚೇರಿಯಲ್ಲಿ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಜೊತೆ ಕೂತಿರುವ ಮಂಜುನಾಥ್ ಸಂತಸದಿಂದ ಬೀಗುತ್ತಿದ್ದಾರೆ.

ಬೆಂಗಳೂರು: ಆಪರೇಶನ್ ಹಸ್ತ ಎಗ್ಗಿಲ್ಲದೆ ನಡೆಯುತ್ತಿದೆ ಮಾರಾಯ್ರೇ. ಕರ್ನಾಟಕ ರಾಜಕಾರಣದಲ್ಲಿ ಶಿವಮೊಗ್ಗದ ಮಾಜಿ ರಾಜ್ಯ ಸಭಾ ಸದಸ್ಯ (Rajya Sabha member ), ಮಾಜಿ ಶಾಸಕ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಅಯನೂರು ಮಂಜುನಾಥ್ (Ayanur Manjunath) ಒಂದು ದೊಡ್ಡ ಹೆಸರು. ನೇರ ಮತ್ತು ನಿರ್ಭಿಡೆ ಮಾತುಗಳಿಗೆ ಹೆಸರಾಗಿರುವ ಮಂಜುನಾಥ್, ನಿನ್ನೆ ಶಿವಮೊಗ್ಗದಲ್ಲಿ ಘೋಷಿಸಿದ ಹಾಗೆ ಇಂದು ಬೆಂಗಳೂರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸೇರ್ಪಡೆಗೊಂಡರು. ಬದುಕಿನ ಇಳಿವಯಸ್ಸಿನಲ್ಲಿರುವ ಅವರಿಗೆ ಈ ಸಂದರ್ಭದಲ್ಲಿ ಪಕ್ಷಾಂತ ಬೇಕಿತ್ತೇ ಅಂತ ಕನ್ನಡಿಗರಲ್ಲಿ ಪ್ರಶ್ನೆ ಹುಟ್ಟೋದು ಸಹಜವೇ. ಆದರೆ ನಮ್ಮ ರಾಜಕಾರಣಿಗಳಿಗೆ ವಯಸ್ಸೆಲ್ಲಿ ಆಗುತ್ತೆ ಮಾರಾಯ್ರೇ? ಕಾಂಗ್ರೆಸ್ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ (Shivamogga LS seat) ಗೆಲ್ಲುವ ಸಾಮರ್ಥ್ಯದ ನಾಯಕನ ತಲಾಶ್ ನಲ್ಲಿದೆ. ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಯೊಂದಿಗೆ ಆ ತಲಾಶ್ ಪ್ರಾಯಶಃ ಕೊನೆಗೊಂಡಿರಬಹುದು. ಕಾಂಗ್ರೆಸ್ ನಾಯಕರನ್ನು ಹಿಗ್ಗಾ ಮುಗ್ಗಾ ಟೀಕಿಸುತ್ತಿದ್ದ ಮಂಜುನಾಥ್ ಅದರ ತೆಕ್ಕೆಗೆ ಬಿದ್ದಿದ್ದು ಆಶ್ಚರ್ಯ ಹುಟ್ಟಿಸೋದು ನಿಜವಾದರೂ, ರಾಜಕಾರಣದಲ್ಲಿ ಯಾರೂ ಮಿತ್ರರಲ್ಲ, ಶತ್ರುಗಳೂ ಅಲ್ಲ ಅನ್ನೋ ಮಾತು ನೆನಪಿಗೆ ಬರುತ್ತದೆ. ಕೆಪಿಸಿಸಿ ಕಚೇರಿಯಲ್ಲಿ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಜೊತೆ ಕೂತಿರುವ ಮಂಜುನಾಥ್ ಸಂತಸದಿಂದ ಬೀಗುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ