ರಾಜ್ಯಪಾಲರು ಬಿಲ್ ಗಳನ್ನು ವಾಪಸ್ಸು ಕಳಿಸಿರುವ ಬಗ್ಗೆ ನಿರುದ್ವಿಗ್ನರಾಗಿ ಮಾತಾಡಿದ ಸಿಎಂ ಸಿದ್ದರಾಮಯ್ಯ

|

Updated on: Aug 24, 2024 | 4:04 PM

ಬೆಂಗಳೂರು ಜಲಮಂಡಳಿಯು ನಗರದಲ್ಲಿ ಕೊಳವೆಗಳ ಮೂಲಕ ಹರಿಸುವ ನೀರಿನ ದರ ಇನ್ನೂ ಹೆಚ್ಚಿಸಿಲ್ಲ ಆದರೆ ಹೆಚ್ಚು ಮಾಡುವ ಆಲೋಚನೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅನೇಕ ವರ್ಷಗಳಿಂದ ನೀರಿನ ದರ ಏರಿಸಿಲ್ಲ ಮತ್ತು ಜಲಮಂಡಳಿಯಲ್ಲಿ ಹಣಕಾಸಿನ ಸಮಸ್ಯೆ ಇದೆ ಎಂದು ಅವರು ಹೇಳಿದರು.

ಬೆಂಗಳೂರು: ರಾಜ್ಯ ಸರ್ಕಾರವು ಅನುಮೋದನೆಗೆ ಕಳಿಸಿದ ಬಿಲ್ ಗಳನ್ನು ರಾಜ್ಯಪಾಲರು ವಾಪಸ್ಸು ಕಳಿಸಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 6 ಬಿಲ್ ಗಳನ್ನು ಅವರು ವಾಪಸ್ಸು ಕಳಿಸಿದ್ದಾರೆ, ಕ್ಲಾರಿಫಿಕೇಶನ್ ಕೇಳಿರುತ್ತಾರೆ, ಸರ್ಕಾರ ಪರಾಮರ್ಶೆ ನಡೆಸಿ ಏನು ಮಾಡಬಹುದು ಅಂತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು. ಬಿಲ್ ಗಳನ್ನು ವಾಪಸ್ಸು ಕಳಿಸುವ ಮೂಲಕ ರಾಜ್ಯಪಲರು ಸಂಘರ್ಷದ ಹಾದಿ ತುಳಿದಿರುವರೇ ಎಂದು ಕೇಳಿದ ಪ್ರಶ್ನೆಗೆ ನಿರುದ್ವಿಗ್ನರಾಗಿ ಉತ್ತರಿಸಿದ ಮುಖ್ಯಮಂತ್ರಿ, ಅವು ವಿಧಾನಸಭೆಯ ಎರಡೂ ಮನೆಗಳಲ್ಲಿ ಪಾಸಾಗಿರುವ ಬಿಲ್ ಗಳು, ಅವರು ಕೇಳಿರುವ ಸ್ಪಷ್ಟೀಕರಣಗಳು ಏನು ಅನ್ನೋದನ್ನು ನೋಡಬೇಕಾಗುತ್ತದೆ. ಅವರು ಕೇಳಿರುವ ಸ್ಪಷ್ಟೀಕರಣವನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ಒಂದು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:ಸಿದ್ದರಾಮಯ್ಯ ನಂತರ ಸಚಿವ ಎಂಬಿ ಪಾಟೀಲ್​ಗೂ ಸಂಕಷ್ಟ, ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಅನುಮತಿ ಕೋರಿದ ಆರ್​ಟಿಐ ಕಾರ್ಯಕರ್ತ

Follow us on