ಜಗ್ಗೇಶ್ ಮತ್ತು ದರ್ಶನ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಲಿಲ್ಲ

|

Updated on: Oct 25, 2023 | 5:08 PM

ತನ್ನಲ್ಲಿ ಮಾಹಿತಿ ಇಲ್ಲ, ಅದನ್ನು ತಿಳಿದುಕೊಂಡ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು. ಪತ್ರಕರ್ತರು ಒತ್ತಾಯಿಸಿದಾಗ, ಅವರು ಅದೇ ಮಾತನ್ನು ಇಂಗ್ಲಿಷ್ ಬಾಷೆಯಲ್ಲಿ ಹೇಳಿದರು. ಆದರೆ, ಇಂದು ಬೆಳಗ್ಗೆ ಕಲಬುರಗಿಯಲ್ಲಿ ಮಾತಾಡಿದ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಯಾರೇ ಉಲ್ಲಂಘಿಸಿದ್ದರೂ ಕಾನೂನು ಕ್ರಮ ಜರುಗಿಸಲಾಗುವುದು ಅಂತ ಹೇಳಿದ್ದರು.

ಮೈಸೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ (Varthur Santosh) ಹುಲಿ ಉಗರಿನ ಪೆಂಡೆಂಟ್ ಧರಿಸಿದ ಆರೋಪದಲ್ಲಿ ಅರೆಸ್ಟ್ ಆದ ಬಳಿಕ ವನ್ಯಜೀವಿ ಸಂರಕ್ಷಣಾ ಕಾಯ್ದೆ (Wildlife Protection Act) ಮತ್ತು ಅದನ್ನು ಉಲ್ಲಂಘಿಸರಬಹದಾದ ಜನರ ಬಗ್ಗೆ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ. ಚಿತ್ರನಟ ದರ್ಶನ್ (Darshan) ಮತ್ತು ನಟ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ಅವರ ವಿರುದ್ಧವೂ ದೂರುಗಳು ದಾಖಲಾಗಿವೆ. ಇವತ್ತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಷಯದ ಬಗ್ಗೆ ಮತ್ತು ಅದರಲ್ಲೂ ನಿರ್ದಿಷ್ಟವಾಗಿ ದರ್ಶನ್ ಹಾಗೂ ಜಗ್ಗೇಶ್ ವಿರುದ್ಧ ಪ್ರಕರಣಗಳು ದಾಖಲಾಗಿರುವ ಕುರಿತು ಪ್ರತಿಕ್ರಿಯೆ ಕೇಳಿದಾಗ ಉತ್ತರಿಸಲು ನಿರಾಕರಿಸಿದರು. ತನ್ನಲ್ಲಿ ಮಾಹಿತಿ ಇಲ್ಲ, ಅದನ್ನು ತಿಳಿದುಕೊಂಡ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು. ಪತ್ರಕರ್ತರು ಒತ್ತಾಯಿಸಿದಾಗ, ಅವರು ಅದೇ ಮಾತನ್ನು ಇಂಗ್ಲಿಷ್ ಬಾಷೆಯಲ್ಲಿ ಹೇಳಿದರು. ಆದರೆ, ಇಂದು ಬೆಳಗ್ಗೆ ಕಲಬುರಗಿಯಲ್ಲಿ ಮಾತಾಡಿದ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಯಾರೇ ಉಲ್ಲಂಘಿಸಿದ್ದರೂ ಕಾನೂನು ಕ್ರಮ ಜರುಗಿಸಲಾಗುವುದು ಅಂತ ಹೇಳಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ