ಕುರುಬ ಸಮಾವೇಶದಲ್ಲಿ ಬೆಳ್ಳಿ ಗದೆ ಹಿಡಿದು ಬಲಭೀಮನಂತೆ ನಿಂತ ಸಿದ್ದರಾಮಯ್ಯ ಬೆಳ್ಳಿ ಕಿರೀಟ ತೊಡಿಸಲು ಬಂದಾಗ ಸ್ಪಷ್ಟವಾಗಿ ನೋ ಅಂದರು!

|

Updated on: Oct 03, 2023 | 5:17 PM

ಎಲ್ಲ ಕಾಣಿಕೆಗಳನ್ನು ಸ್ವೀಕರಿಸಿದರು ಆದರೆ ಕಿರೀಟವನ್ನು ಮಾತ್ರ ಸುತಾರಾಂ ತಲೆ ಮೇಲೆ ಇಡಗೊಡಲಿಲ್ಲ. ಸಿದ್ದರಾಮಯ್ಯ ಸಮಾಜವಾದಿ ಹಿನ್ನೆಲೆಯವರಾಗಿರುವ ಕಾರಣ ಕಿರೀಟವನ್ನು ತೊಡಲು ನಿರಾಕರಿಸಿರಬಹುದು. ಆದರೆ ಗದೆಯನ್ನು ಹಿಡಿದು ಕೆಮರಾಗಳಿಗೆ ಬಲಭೀಮನ ಹಾಗೆ ಪೋಸು ನೀಡಿ ಸಂಭ್ರಮಿಸಿದರು. ಸಿದ್ದರಾಮಯ್ಯ ಎಡಭಾಗದಲ್ಲಿರುವವರು ಹರಿಯಾಣದ ರಾಜ್ಯಪಾಲ ಬಂಗಾರು ದತ್ತಾತ್ರೇಯ.

ಬೆಳಗಾವಿ: ಶೆಪ್ಹರ್ಡ್ ಇಂಡಿಯ ಇಂಟರ್ ನ್ಯಾಷನಲ್ (Shepherd India International) ನಗರದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಬೃಹತ್ ಕುರುಬ ಸಮಾವೇಶದಲ್ಲಿ (Shepherds National Convention) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಅದ್ದೂರಿಯಾಗಿ ಸನ್ಮಾನಿಸಲಾಯಿತು. ಕುರುಬ ಸಮುದಾಯದಕ್ಕೆ ಸೇರಿದ ನಾನಾ ರಾಜ್ಯಗಳ ರಾಷ್ಟ್ರಮಟ್ಟದ ಕುರುಬ ನಾಯಕರು, ರಾಜ್ಯಪಾಲರು, ಸಂಸದರು, ಶಾಸಕರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರನ್ನು ಬೆಳ್ಳಿ ಗದೆ, ಬೆಳ್ಳಿ ಖಡ್ಗ, ಬೆಳ್ಳಿ ಕಿರೀಟದಿಂದ ಸನ್ಮಾನಿಸಲಾಯಿತು ಮತ್ತು ಕುರುಬ ಸಮುದಾಯದ (Kuruba Community) ಐಡೆಂಟಿಟಿಯಾಗಿರುವ ಕಂಬಳಿಯನ್ನು ಸಹ ಅವರಿಗೆ ಹೊದಿಸಲಾಯಿತು. ಸಿದ್ದರಾಮಯ್ಯ ಎಲ್ಲ ಕಾಣಿಕೆಗಳನ್ನು ಸ್ವೀಕರಿಸಿದರು ಆದರೆ ಕಿರೀಟವನ್ನು ಮಾತ್ರ ಸುತಾರಾಂ ತಲೆ ಮೇಲೆ ಇಡಗೊಡಲಿಲ್ಲ. ಸಿದ್ದರಾಮಯ್ಯ ಸಮಾಜವಾದಿ ಹಿನ್ನೆಲೆಯವರಾಗಿರುವ ಕಾರಣ ಕಿರೀಟವನ್ನು ತೊಡಲು ನಿರಾಕರಿಸಿರಬಹುದು. ಆದರೆ ಗದೆಯನ್ನು ಹಿಡಿದು ಕೆಮರಾಗಳಿಗೆ ಬಲಭೀಮನ ಹಾಗೆ ಪೋಸು ನೀಡಿ ಸಂಭ್ರಮಿಸಿದರು. ಸಿದ್ದರಾಮಯ್ಯ ಎಡಭಾಗದಲ್ಲಿರುವವರು ಹರಿಯಾಣದ ರಾಜ್ಯಪಾಲ ಬಂಗಾರು ದತ್ತಾತ್ರೇಯ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ