ಕಾವೇರಿ ನದಿ ನೀರು ಸಂಕಷ್ಟ ಚರ್ಚಿಸಲು ಸರ್ವಪಕ್ಷ ಸಭೆ ಕರೆದಿರುವ ಸಿದ್ದರಾಮಯ್ಯ, ಹರಿಪ್ರಸಾದ್ ಬಗ್ಗೆ ಕಾಮೆಂಟ್ ಮಾಡಲ್ಲ ಎಂದರು!

|

Updated on: Sep 13, 2023 | 2:16 PM

ಸ್ಥಿತಿ ಗಂಭೀರವಾಗಿದೆ, ವಿರೋಧ ಪಕ್ಷಗಳ ನಾಯಕರ ಅಭಿಪ್ರಾಯ ತಿಳಿಯಲು ಸರ್ವಪಕ್ಷ ಸಭೆ ಕರೆದಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು. ತಮ್ಮ ವಿರುದ್ಧ ಒಂದೇ ಸಮ ಟೀಕಾಸ್ತ್ರ ಪ್ರಯೋಗಿಸುತ್ತಿರುವ ಬಿಕೆ ಹರಿಪ್ರಸಾದ್ ಗೆ ನೋಟೀಸ್ ಜಾರಿಯಾಗಿದೆಯಾ ಅಂತ ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ, ಅವರ ಬಗ್ಗೆ ಮಾತಾಡಲ್ಲ ಎಂದು ಹೇಳಿದರು.

ಬೆಂಗಳೂರು: ತಮಿಳುನಾಡುಗೆ ಮುಂದಿನ 15 ದಿನಗಳವರೆಗೆ ದಿನಂಪ್ರತಿ 5,000 ಕ್ಯೂಸೆಕ್ಸ್ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ (CWRC) ಆದೇಶ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಸಂಕಷ್ಟಕ್ಕಿಟ್ಟುಕೊಂಡಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗದ ಸ್ಥಿತಿಯಲ್ಲಿ ಸರ್ಕಾರವಿದೆ. ಹಾಗಾಗೇ, ವಿಷಯ ಬಗ್ಗೆ ಬೇರೆ ಪಕ್ಷಗಳ ನಾಯಕರ ಅಭಿಪ್ರಾಯ ತಿಳಿದುಕೊಳ್ಳಲು ಸಿದ್ದರಾಮಯ್ಯ ಇಂದು ಸರ್ವ ಪಕ್ಷ ಸಭೆ (all party meeting) ಕರೆದಿದ್ದಾರೆ. ಸಭೆಗೆ ಮೊದಲು ವಿಧಾನ ಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಿದ್ದರಾಮಯ್ಯ, ಕರ್ನಾಟಕದ ಜನತೆಗೆ ಕುಡಿಯಲು ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಅಂಥದರಲ್ಲಿ ಎರಡು ವಾರಗಳ ಕಾಲ ಪ್ರತಿದಿನ 5,000 ಕ್ಯೂಸೆಕ್ಸ್ ನೀರು ತಮಿಳುನಾಡುಗೆ ಬಿಡುವಂತೆ ಸಿಡಬ್ಲ್ಯೂ ಆರ್ ಸಿ ಹೇಳಿದೆ. ಸ್ಥಿತಿ ಗಂಭೀರವಾಗಿದೆ, ವಿರೋಧ ಪಕ್ಷಗಳ ನಾಯಕರ ಅಭಿಪ್ರಾಯ ತಿಳಿಯಲು ಸರ್ವಪಕ್ಷ ಸಭೆ ಕರೆದಿದ್ದೇನೆ ಎಂದು ಹೇಳಿದರು. ತಮ್ಮ ವಿರುದ್ಧ ಒಂದೇ ಸಮ ಟೀಕಾಸ್ತ್ರ ಪ್ರಯೋಗಿಸುತ್ತಿರುವ ಬಿಕೆ ಹರಿಪ್ರಸಾದ್ ಗೆ ನೋಟೀಸ್ ಜಾರಿಯಾಗಿದೆಯಾ ಅಂತ ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ, ಅವರ ಬಗ್ಗೆ ಮಾತಾಡಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ