Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಕ್ಟೋರಿಯಾ ಆಸ್ಪತ್ರೆ ನೆಫ್ರೋಯುರಾಲಜಿ ಅವ್ಯವಸ್ಥೆ: ಆಸ್ಪತ್ರೆಗೆ ದಾಖಲಾದವರು ಬದುಕಿಬರುವುದೇ ಅನುಮಾನ!

ವಿಕ್ಟೋರಿಯಾ ಆಸ್ಪತ್ರೆ ನೆಫ್ರೋಯುರಾಲಜಿ ಅವ್ಯವಸ್ಥೆ: ಆಸ್ಪತ್ರೆಗೆ ದಾಖಲಾದವರು ಬದುಕಿಬರುವುದೇ ಅನುಮಾನ!

Poornima Agali Nagaraj
| Updated By: ಸಾಧು ಶ್ರೀನಾಥ್​

Updated on: Sep 13, 2023 | 12:33 PM

ರಂಜಿತ್ ರಾಜ್ ಎಂಬ ರೋಗಿ ರಾಮನಗರದ ಯುವಕ. ಯುರಿನ್ ಬ್ಲಾಕ್ ಆಗಿದೆ ಎನ್ನುವ ಕಾರಣಕ್ಕೆ ತಾನೇ ಬಂದು ಆಸ್ಪತ್ರೆಗೆ ದಾಖಾಲಾಗಿದ್ದ. ಆದ್ರೆ ಆಸ್ಪತ್ರೆಗೆ ದಾಖಾಲಾಗಿ ಚಿಕಿತ್ಸೆ ಪಡೆದುಕೊಂಡ ಬಳಿಕ ಕೋಮಾಗೆ ಹೋಗಿದ್ದಾನೆ. ಕಳೆದ 9 ತಿಂಗಳಿನಿಂದ ನೆಫ್ರೋ ಯುರಾಲಜಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 9 ತಿಂಗಳಿನಿಂದ 1 ಲಕ್ಷದ 90 ಸಾವಿರ ರೂಪಾಯಿ ಬಿಲ್ ಆಗಿದೆ. ಸದ್ಯ ರಂಜಿತ್ ರಾಜ್ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ಟಿವಿ 9 ಗೆ ಲಭ್ಯವಾಗಿದೆ.

ಬೆಂಗಳೂರು: ರಾಜಧಾನಿಯ ಪುರಾತನ, ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯ ನೆಫ್ರೋ ಯುರಾಲಜಿ (Bangalore Victoria Hospital Nephro-Urology) ಅವ್ಯವಸ್ಥೆಯ ಆಗರವಾಗಿದೆ. ಆಸ್ಪತ್ರೆಗೆ ದಾಖಲಾದ ರೋಗಿಗಳು (Patient) ಬದುಕಿಬರುವುದೇ ಅನುಮಾನವಾಗಿದೆ. ಯುರಾಲಜಿ ಆಸ್ಪತ್ರೆಯ ನಿರ್ದೇಶಕರ ವಿರುದ್ದ ಹಲವು ಆರೋಪಗಳು ಕೇಳಿಬಂದಿವೆ. ಇದು ಹೆಸರಿಗೆ ಮಾತ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅಂತ ಬಿರುದು ತೆಗೆದುಕೊಂಡಿದೆ. ಆದ್ರೆ ಮೂತ್ರಪಿಂಡದ ಚಿಕಿತ್ಸೆಗೆ ಬಂದವರು ಜೀವಂತ ಉಳಿಯುತ್ತಾರಾ ಇಲ್ವಾ ಎನ್ನುವ ಬಗ್ಗೆ ಅನುಮಾನಗಳು ಕಾಡುತ್ತವೆ. ಹಾಗಿದೆ ಇಲ್ಲಿನ ಆಸ್ಪತ್ರೆಯ ವ್ಯವಸ್ಥೆ. ಯಾಕಂದ್ರೆ ಈ ವರ್ಷ ನೆಪ್ರೋ ಯುರಾಲಜಿ ಆಸ್ಪತ್ರೆಯಲ್ಲಿ 20 ರಿಂದ 25 ಜನರಿಗೆ ಮೂತ್ರಪಿಂಡ ವರ್ಗಾವಣೆ ಮಾಡಿದ್ದಾರೆ. ಆದ್ರೆ ಹೀಗೆ ಮೂತ್ರಪಿಂಡ ವರ್ಗಾವಣೆ ಮಾಡಿದ ನಂತರ ನಾಲ್ಕು ಜನ ಮರಣ ಹೊಂದಿದ್ದಾರೆ. ಅಲ್ಲದೇ ಇವರಲ್ಲಿ ಐದಾರು ಜನ ಹೊಸ ಕಿಡ್ನಿ ವೈಫಲ್ಯಗೊಂಡು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ.

ರಂಜಿತ್ ರಾಜ್ ಎಂಬ ರೋಗಿ ರಾಮನಗರದ ಯುವಕ. ಯುರಿನ್ ಬ್ಲಾಕ್ ಆಗಿದೆ ಎನ್ನುವ ಕಾರಣಕ್ಕೆ ತಾನೇ ಬಂದು ಆಸ್ಪತ್ರೆಗೆ ದಾಖಾಲಾಗಿದ್ದ. ಆದ್ರೆ ಆಸ್ಪತ್ರೆಗೆ ದಾಖಾಲಾಗಿ ಚಿಕಿತ್ಸೆ ಪಡೆದುಕೊಂಡ ಬಳಿಕ ಕೋಮಾಗೆ ಹೋಗಿದ್ದಾನೆ. ಕಳೆದ 9 ತಿಂಗಳಿನಿಂದ ನೆಫ್ರೋ ಯುರಾಲಜಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 9 ತಿಂಗಳಿನಿಂದ 1 ಲಕ್ಷದ 90 ಸಾವಿರ ರೂಪಾಯಿ ಬಿಲ್ ಆಗಿದೆ. ಸದ್ಯ ರಂಜಿತ್ ರಾಜ್ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ಟಿವಿ 9 ಗೆ ಲಭ್ಯವಾಗಿದೆ.

ಇಷ್ಟಾದರೂ ಆಸ್ಪತ್ರೆಯ ಆಡಳಿತ ವರ್ಗ ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಹೀಗಾಗಿ ಸರ್ಕಾರ ಈ ಕುರಿತಾಗಿ ಕ್ರಮ ತೆಗೆದುಕೊಳ್ಳಬೇಕು. ನೆಫ್ರೋ ಯುರಾಲಜಿ ವಿಭಾಗಕ್ಕೆ ಹೊದ ಆಡಳಿತಾಧಿಕಾರಿ ನೇಮಕ ಆಗಬೇಕು. ರಂಜಿತ್ ರಾಜ್ ವಿಚಾರದಲ್ಲಿ ಕುಲಂಕಶವಾಗಿ ತನಿಖೆ ನಡೆಯಬೇಕು. ಈ ಘಟನೆ ನಡೆದು 11 ತಿಂಗಳಾದ್ರು ಆರೋಗ್ಯ ಸಚಿವರಾಗಲಿ, ಸರ್ಕಾರವಾಗಲಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈಗಾಲಾದ್ರು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಅಂತಾ ಬೆಂಗಳೂರು ದಕ್ಷಿಣ ಜಿಲ್ಲಾ ವೈದ್ಯಕೀಯ ಘಟಕದ ಅಧ್ಯಕ್ಷ ಶಂಕರ್ ಗುಹಾ ದ್ವಾರಕನಾಥ್ ಅವರು ಆರೋಪ ಮಾಡಿದ್ದಾರೆ.

ನೆಫ್ರೋ ಯುರಾಲಜಿ ನಿರ್ದೇಶಕರು ನಿರ್ಲಕ್ಷ ವಹಿಸಿದ್ದಾರೆ. ಸರಿಯಾಗಿ ಆಸ್ಪತ್ರೆಯ ನಿರ್ವಹಣೆ ಮಾಡ್ತಿಲ್ಲ. ರೋಗಿಗಳ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ ಅಂತ ಆರೋಪ ಮಾಡಿ ಆಸ್ಪತ್ರೆಯ ವಿರುದ್ದ ಕ್ರಮ ತೆಗದುಕೊಳ್ಳುವಂತೆ ಶಂಕರ್ ಗುಹಾ ದ್ವಾರಕನಾಥ್ ಸರ್ಕಾರಕ್ಕೂ ಪತ್ರ ಬರೆದಿದ್ದಾರೆ. ಸರ್ಕಾರಕ್ಕೆ ಬರೆದಿರುವ ಈ ಪತ್ರವೂ ಟಿವಿ 9 ಗೆ ಲಭ್ಯವಾಗಿದೆ.