ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಆಶ್ರಯ ಪಡೆದಿದ್ದು ಕೆಪಿಸಿಸಿ ಮಾಧ್ಯಮ ವಕ್ತಾರೆ ಅಂಜುಂ ಮನೆಯಲ್ಲಿ
ಲಭ್ಯವಾಗಿರುವ ಮಾಹಿತಿ ಪ್ರಕಾರ ಬೆಂಗಳೂರು ಕೇಂದ್ರ ಅಪರಾಧ ದಳದ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಅಂಜುಂಗೆ ನೋಟೀಸ್ ನೀಡಿದ್ದಾರೆ. ಅಂಜುಂ ಮತ್ತು ಚೈತ್ರಾ ಕೇವಲ ಸ್ನೇಹಿತೆಯರು ಅಥವಾ ಅವರ ನಡುವೆ ಬೇರೆ ಲಿಂಕ್ ಏನಾದರೂ ಇದೆಯಾ ಅನ್ನೋದು ಪೊಲೀಸ್ ವಿಚಾರಣೆ ನಂತರವೇ ಗೊತ್ತಾಗಬೇಕು.
ಬೆಂಗಳೂರು: ವಿಧಾನ ಸಭಾ ಚುನಾವಣೆಯಲ್ಲಿ (Assembly polls ) ಸ್ಪರ್ಧಿಸಲು ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ರೂ. 4 ಕೋಟಿ ವಂಚಿಸಿದ ಆರೋಪ ಎದುರಿಸುತ್ತಿರುವ ಚೈತ್ರಾ ಕುಂದಾಪುರಗೆ ಪೊಲೀಸರು ತನ್ನ ಬೇಟೆಯಾಡಲು ಇಳಿದಿರುವ ಸಂಗತಿ ಮೊದಲೇ ಗೊತ್ತಾಗಿಬಿಟ್ಟಿತ್ತು. ಹಾಗಾಗೇ, ಒಂದು ವಾರದಿಂದ ತಲೆಮರೆಸಿಕೊಂಡಿದ್ದ ಚೈತ್ರಾ ಅಡಗಿ ಕುಳಿತಿದ್ದಾದರೂ ಎಲ್ಲಿ ಗೊತ್ತ್ತಾ? ಕಾಂಗ್ರೆಸ್ ಪಕ್ಷದ ಮಾಧ್ಯಮ ವಕ್ತಾರೆಯಾಗಿರುವ ಅಂಜುಂ ಎನ್ನುವವರ ಮನೆಯಲ್ಲಿ. ಅಂಜುಂ ಚೈತ್ರಾಗೆ ಆಶ್ರಯ ನೀಡಿದ್ದು ಯಾಕೆ ಅಂತ ಪೊಲೀಸರು ಕೆದಕುವ ಪ್ರಯತ್ನ ಮಾಡುತ್ತಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಬೆಂಗಳೂರು ಕೇಂದ್ರ ಅಪರಾಧ ದಳದ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಅಂಜುಂಗೆ ನೋಟೀಸ್ ನೀಡಿದ್ದಾರೆ. ಅಂಜುಂ ಮತ್ತು ಚೈತ್ರಾ ಕೇವಲ ಸ್ನೇಹಿತೆಯರು ಅಥವಾ ಅವರ ನಡುವೆ ಬೇರೆ ಲಿಂಕ್ ಏನಾದರೂ ಇದೆಯಾ ಅನ್ನೋದು ಪೊಲೀಸ್ ವಿಚಾರಣೆ ನಂತರವೇ ಗೊತ್ತಾಗಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos