ಮಂತ್ರಾಲಯದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಪೋಷಕರು ಮತ್ತು ಸುಧಾ ಮೂರ್ತಿ, ಶ್ರೀ ಸುಭುದೇಂದ್ರ ತೀರ್ಥರಿಂದ ಆಶೀರ್ವಾದ
ಸುಧಾಮೂರ್ತಿ ಅವರು ತಮ್ಮ ಬೀಗರಿಗೆ ರಾಜ್ಯದ ಹೆಸರುವಾಸಿ ದೇವಸ್ಥಾನ ಹಾಗೂ ಪುಣ್ಯಕ್ಷೇತ್ರಗಳಿಗೆ ಕರೆದೊಯ್ಯುತ್ತಿದ್ದಾರೆ. ಅವರೆಲ್ಲ ರಾಯಚೂರು ಹತ್ತಿರ ಮಂತ್ರಾಲಯದಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ಇಲ್ಲಿನ ಪೀಠಾಧಿಪತಿ ಸುಭುದೇಂದ್ರ ತೀರ್ಥರಿಂದ ಆಶೀರ್ವಾದ ಪಡೆದರು
ರಾಯಚೂರು: ಇನ್ಫೋಸಿಸ್ ಸಂಸ್ಥೆ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಸುಧಾ ಮೂರ್ತಿ (Sudha Murthy ) ಅವರ ಮನೆಯಲ್ಲಿ ಸಂಭ್ರಮವೋ ಸಂಭ್ರಮ! ಯಾಕಿರಬೇಡ? ಮಗಳು ಮತ್ತು ಅಳಿಯ ಹಾಗೂ ಬೀಗರು ಮನೆಗೆ ಬಂದಿದ್ದಾರೆ. ಅಳಿಯ ಯಾರು ಅಂತ ಎಲ್ಲ ಕನ್ನಡಿಗರಿಗೆ ಗೊತ್ತು. ಹೌದು, ಮಾರಾಯ್ರೇ ಯುನೈಟೆಡ್ ಕಿಂಗ್ಡಮ್ ಪ್ರಧಾನಿ ರಿಷಿ ಸುನಾಕ್ (Rishi Sunak) ಭಾರತದಲ್ಲಿ ಇತ್ತೀಚಿಗೆ ಸಂಪನ್ನಗೊಂಡ ಜಿ-20 ಶೃಂಗಭೆಯಲ್ಲಿ ಪಾಲ್ಗೊಳ್ಳಲು ಅಗಮಿಸಿದಾಗ ಜೊತೆಗೆ ಪತ್ನಿ ಅಕ್ಷತಾ (Akshata) ಮತ್ತು ತಂದೆ ತಾಯಿಗಳಾಗಿರುವ ಯಶ್ವೀರ್ (Yashveer) ಹಾಗೂ ಉಷಾ (Usha) ಅವರನ್ನೂ ಕರೆತಂದರು. ಸಭೆಯ ನಂತರ ಅವರು ಪತ್ನಿಯೊಂದಿಗೆ ಲಂಡನ್ ಗೆ ವಾಪಸ್ಸಾದರು ಅದರೆ ಪೋಷಕರು ಭಾರತದಲ್ಲೇ ಉಳಿದಿದ್ದಾರೆ. ಸುಧಾಮೂರ್ತಿ ಅವರು ತಮ್ಮ ಬೀಗರಿಗೆ ರಾಜ್ಯದ ಹೆಸರುವಾಸಿ ದೇವಸ್ಥಾನ ಹಾಗೂ ಪುಣ್ಯಕ್ಷೇತ್ರಗಳಿಗೆ ಕರೆದೊಯ್ಯುತ್ತಿದ್ದಾರೆ. ಅವರೆಲ್ಲ ರಾಯಚೂರು ಹತ್ತಿರ ಮಂತ್ರಾಲಯದಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ಇಲ್ಲಿನ ಪೀಠಾಧಿಪತಿ ಸುಭುದೇಂದ್ರ ತೀರ್ಥರಿಂದ ಆಶೀರ್ವಾದ ಪಡೆದರು. ಶ್ರೀಗಳು ಯಶ್ವೀರ್ ದಂಪತಿಗೆ ಶಾಲು ಹೊದಿಸಿ ಪರಿಮಳ ಪ್ರಸಾದ ಹಾಗೂ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ