Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೈತ್ರಾ ಕುಂದಾಪುರಗೆ ಪೊಲೀಸ್ ಬಂಧನ ಹೊಸದಲ್ಲ, ಹಿಂದೆಯೂ ಆಕೆಗೆ ಆತಿಥ್ಯ ಲಭ್ಯವಾಗಿತ್ತು!

ಚೈತ್ರಾ ಕುಂದಾಪುರಗೆ ಪೊಲೀಸ್ ಬಂಧನ ಹೊಸದಲ್ಲ, ಹಿಂದೆಯೂ ಆಕೆಗೆ ಆತಿಥ್ಯ ಲಭ್ಯವಾಗಿತ್ತು!

ಅರುಣ್​ ಕುಮಾರ್​ ಬೆಳ್ಳಿ
|

Updated on:Sep 13, 2023 | 3:02 PM

ಇದು ಕೇವಲ ಮಾತಿನ ಜಗಳ ಅಲ್ಲ. ಆಕೆ ತನ್ನೊಂದಿಗೆ ವಾಗ್ವಾದ ನಡೆಸುತ್ತಿರುವ ವ್ಯಕ್ತಿಯ ಮೇಲೆ ಹಲ್ಲೆಯೂ ನಡೆಸುತ್ತಾಳೆ. ಜಗಳ ನಡಯುತ್ತಿದ್ದ ಸ್ಥಳದಲ್ಲಿ ತಳ್ಳಾಟ ನೂಕಾಟ ಕೂಡ ಜರುಗುತ್ತದೆ, ಘಟನೆಯ ಬಳಿಕ ಚೈತ್ರಾಳನ್ನು ಅರೆಸ್ಟ್ ಮಾಡಲಾಗಿತ್ತು.

ಉಡುಪಿ: ಚೈತ್ರಾ ಕುಂದಾಪುರಗೆ (Chaitra Kundapura) ಪೊಲೀಸ್, ಬಂಧನ ಜಗಳ-ಜೂಟಿ ಹೊಸದೇನೂ ಅಲ್ಲ ಮಾರಾಯ್ರೇ. ಆಕೆ ಜನರನ್ನು ವಂಚಿಸುವ ಮೊದಲು ರೋಡಿಗಿಳಿದು ಗೂಂಡಾಗಿರಿ ಮಾಡಿದ ಸಂಗತಿಗಳು ಸಹ ಒಂದೊಂದಾಗಿ ಹೊರಬರುತ್ತಿವೆ. ಈಗ್ಗೆ ಕೆಲ ವರ್ಚಗಳ ಹಿಂದೆ ಅ ಚೈತ್ರಾ ಕೆಲ ಯುವಕರ ಪಡೆ ಕಟ್ಟಿಕೊಂಡು ಸುಬ್ರಮಣ್ಯದ (Subramanya) ಕಾಶೀಕಟ್ಟೆ ಎಂಬ ಸ್ಥಳದಲ್ಲಿ ಬೀದಿ ಜಗಳ ನಡೆಸಿದ ವಿಡಿಯೋ ನಮಗೆ ಸಿಕ್ಕಿದೆ. ಜಗಳ ಯಾಕೆ ಹುಟ್ಟಿಕೊಂಡಿತ್ತು ಅನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ ಗಟ್ಟಿಗಿತ್ತಿ ಚೈತ್ರಾ ಗಂಡಸರೊಂದಿಗೆ ಕಾದಾಡುತ್ತಿರುವುದನ್ನು (fight) ಇಲ್ಲಿ ನೋಡಬಹುದು. ಇದು ಕೇವಲ ಮಾತಿನ ಜಗಳ ಅಲ್ಲ. ಆಕೆ ತನ್ನೊಂದಿಗೆ ವಾಗ್ವಾದ ನಡೆಸುತ್ತಿರುವ ವ್ಯಕ್ತಿಯ ಮೇಲೆ ಹಲ್ಲೆಯೂ ನಡೆಸುತ್ತಾಳೆ. ಜಗಳ ನಡಯುತ್ತಿದ್ದ ಸ್ಥಳದಲ್ಲಿ ತಳ್ಳಾಟ ನೂಕಾಟ ಕೂಡ ಜರುಗುತ್ತದೆ, ಘಟನೆಯ ಬಳಿಕ ಚೈತ್ರಾಳನ್ನು ಅರೆಸ್ಟ್ ಮಾಡಲಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 13, 2023 03:02 PM