ಬಸವಣ್ಣ ವಚನ ಹೇಳುತ್ತಲೇ, ನಿಮ್ಮ ಜಾತಿ ಯಾವುದು ಅಂತ ಕೇಳ್ತಾರೆ: ಸಿದ್ದರಾಮಯ್ಯ ಬೇಸರ

Updated on: Sep 07, 2025 | 10:43 PM

CM Siddaramaiah speaks at Narayana Guru jayanthi function: ಸಮಾನತೆ ಸಾಧಿಸಬೇಕಾದರೆ ಎಲ್ಲರೂ ವಿದ್ಯೆ ಕಲಿಯಬೇಕು. ನಿಮ್ಮ ನಿಮ್ಮ ಕುಲಕಸುಬಿಗೆ ಕಟ್ಟುಬೀಳಬೇಕೆಂದಿಲ್ಲ. ನೀವೂ ಕೂಡ ಡಾಕ್ಟರಾಗಬಹುದು, ಎಂಜಿನಿಯರಾಗಬಹುದು, ವಿಜ್ಞಾನಿಯಾಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ ಅವರು ಬಸವಣ್ಣನ ತತ್ವಗಳು ಬಾಯಿ ಮಾತಿಗಷ್ಟೇ ಸೀಮಿತವಾಗಿರುವುದನ್ನು ಎತ್ತಿ ತೋರಿಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 7: ಸಮಾನತೆ ಸಾಧಿಸಬೇಕಾದರೆ ಎಲ್ಲರೂ ವಿದ್ಯೆ ಕಲಿಯಬೇಕು. ನಿಮ್ಮ ನಿಮ್ಮ ಕುಲಕಸುಬಿಗೆ ಕಟ್ಟುಬೀಳಬೇಕೆಂದಿಲ್ಲ. ನೀವೂ ಕೂಡ ಡಾಕ್ಟರಾಗಬಹುದು, ಎಂಜಿನಿಯರಾಗಬಹುದು, ವಿಜ್ಞಾನಿಯಾಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ ಅವರು ಬಸವಣ್ಣನ ತತ್ವಗಳು ಬಾಯಿ ಮಾತಿಗಷ್ಟೇ ಸೀಮಿತವಾಗಿರುವುದನ್ನು ಎತ್ತಿ ತೋರಿಸಿದ್ದಾರೆ. ಬಸವಣ್ಣನ ವಚನ ಹೇಳುತ್ತಾರೆ, ಅದೇ ಕ್ಷಣದಲ್ಲಿ ನಿಮ್ಮ ಜಾತಿ ಯಾವುದು ಎಂದು ಕೇಳುತ್ತಾರೆ. ನಿಮ್ಮ ಕುಲ ಯಾವುದು, ನಿಮ್ಮ ಮನೆ ದೇವರು ಯಾವುದು ಎಂದು ಕೇಳುತ್ತಾರೆ ಎಂದು ಸಿದ್ದರಾಮಯ್ಯ ಬೇಸರ ಹೊರಹಾಕಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅಲ್ಲದೇ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಧು ಬಂಗಾರಪ್ಪ, ದಿನೇಶ್ ಅಮೀನ್​ಮಟ್ಟು, ಈಡಿಗ ಸಮುದಾಯದ ಶ್ರೀಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ