AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Council Proceedings: ವಿಧಾನ ಪರಿಷತ್​ನಲ್ಲಿ ಸಿದ್ದರಾಮಯ್ಯ-ರವಿಕುಮಾರ್ ಜುಗಲ್ ಬಂದಿ, ಸದಸ್ಯನನ್ನು ಬಿಜೆಪಿಯ ಪ್ರಖರ ನಾಯಕನೆಂದ ಮುಖ್ಯಮಂತ್ರಿ!

Council Proceedings: ವಿಧಾನ ಪರಿಷತ್​ನಲ್ಲಿ ಸಿದ್ದರಾಮಯ್ಯ-ರವಿಕುಮಾರ್ ಜುಗಲ್ ಬಂದಿ, ಸದಸ್ಯನನ್ನು ಬಿಜೆಪಿಯ ಪ್ರಖರ ನಾಯಕನೆಂದ ಮುಖ್ಯಮಂತ್ರಿ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 14, 2023 | 2:49 PM

2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇಕಡ 51 ರಷ್ಟು ವೋಟು ಪಡೆದು ಅಧಿಕಾರಕ್ಕೆ ಬಂತು ರವಿಕುಮಾರ್ ಅಂತ ಹೇಳಿದಾಗ ಆಡಳಿತ ಪಕ್ಷದ ಸದಸ್ಯರು ಗಲಾಟೆ ಶುರುಮಾಡುತ್ತಾರೆ.

ಬೆಂಗಳೂರು: ವಿಧಾನ ಪರಿಷತ್ ನಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಬಿಜೆಪಿ ಎಮ್ ಎಲ್ ಸಿ  ಎನ್ ರವಿಕುಮಾರ್ (N Ravi Kumar) ನಡುವೆ ಜುಗಲ್ ಬಂದಿ ನಡೆಯಿತು. ಪ್ರಶ್ನೆಯೊಂದಕ್ಕೆ ಉತ್ತರ ನೀಡುವಾಗ ಮುಖ್ಯಮಂತ್ರಿಯವರು, ತಮ್ಮ ಮಾತಿಗೆ ಪದೇಪದೆ ಅಡ್ಡಿಪಡಿಸುತ್ತಿದ್ದ ರವಿಕುಮಾರ್ ಅವರನ್ನು ಸದನದಲ್ಲಿರುವ ಬಿಜೆಪಿ ನಾಯಕರ ಪೈಕಿ ಅವರೇ ಪ್ರಖರ ನಾಯಕ ಅಂತ ಹೇಳಿ ಮಾತಾಡಲು ಅವಕಾಶ ಮಾಡಿಕೊಡಿ ಸಭಾಪತಿ ಅವರಿಗೆ ಹೇಳುತ್ತಾರೆ. ಮತ್ತೊಬ್ಬ ಬಿಜೆಪಿ ಶಾಸಕ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಮುಖ್ಯಮಂತ್ರಿಗೆ ಏನನ್ನೋ ಹೇಳುತ್ತಾರೆ. ಆದರೆ ಎಲ್ಲರ ಗಮನ ರವಿಕುಮಾರ್ ಮೇಲಿರುತ್ತದೆ. ಪ್ರಜಾತಂತ್ರ ವ್ಯವಸ್ಥೆ ಸಫಲವಾಗಬೇಕಾದರೆ ವಿರೋಧ ಪಕ್ಷ ಪ್ರಬಲವಾಗಿರಬೇಕು ಎಂದು ಮುಖ್ಯಮಂತ್ರಿ ಹೇಳಿದ ಮಾತನ್ನೇ ರವಿಕುಮಾರ್ ಪುನರುಚ್ಛರಿಸುತ್ತಾರೆ. 2004, 2008 ಮತ್ತು 2018ರಲ್ಲಿ ರಾಜ್ಯದ ಜನತೆ ಬಿಜೆಪಿ ಸಂಪೂರ್ಣ ಬಹುಮತ ನೀಡಲಿಲ್ಲವಾದರೂ ಪಕ್ಷ ಅಧಿಕಾರ ನಡೆಸಬಹುದೆಂಬ ಸೂಚನೆ ನೀಡಿದ್ದರು. ಮುಖ್ಯಮಂತ್ರಿಯವರು ಶೇಕಡ 36 ರಷ್ಟು ವೋಟು ಪಡೆದಿದ್ದನ್ನು ಹೇಳುತ್ತಾರೆ, ಆದರೆ 2019 ರ ಲೋಕಸಭಾ ಚುನಾವಣೆಯಲ್ಲ್ಲಿ ಬಿಜೆಪಿ ಶೇಕಡ 51 ರಷ್ಟು ವೋಟು ಪಡೆದು ಅಧಿಕಾರಕ್ಕೆ ಬಂತು ಅಂತ ಹೇಳಿದಾಗ ಆಡಳಿತ ಪಕ್ಷದ ಸದಸ್ಯರು ಗಲಾಟೆ ಶುರುಮಾಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ