Kalaburagi: ಬಾಬುರಾವ್ ಚಿಂಚನಸೂರ್ ಬಿಜೆಪಿ ಕೋಲಿ ಸಮಾಜಕ್ಕೆ ದೊಡ್ಡ ದ್ರೋಹ ಬಗೆದಿದ್ದಾರೆ: ಎನ್ ರವಿಕುಮಾರ್

Kalaburagi: ಬಾಬುರಾವ್ ಚಿಂಚನಸೂರ್ ಬಿಜೆಪಿ ಕೋಲಿ ಸಮಾಜಕ್ಕೆ ದೊಡ್ಡ ದ್ರೋಹ ಬಗೆದಿದ್ದಾರೆ: ಎನ್ ರವಿಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 23, 2023 | 1:33 PM

ಬಾಬುರಾವ್ ಮತ್ತು ಮಲ್ಲಿಕಾರ್ಜುನ ಖರ್ಗೆಯವರಿಗೆ ಕಲ್ಯಾಣ ಕರ್ನಾಟಕ ಜನತೆ ಪಾಠ ಕಲಿಸಲಿದೆ, ಅವರನ್ನು ಬಿಜೆಪಿ ಎಕ್ಸ್ ಪೋಸ್ ಮಾಡಲಿದೆ ಎಂದು ರವಿಕುಮಾರ್ ಹೇಳಿದರು.

ಕಲಬುರಗಿ: ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾಗಿದ್ದ ಬಾಬುರಾವ್ ಚಿಂಚನಸೂರ್ (Baburao Chinchansur,) ಪಷ ತೊರೆದು ಕಾಂಗ್ರೆಸ್ (Congress) ಸೇರಿದ್ದು ದೊಡ್ಡ ಸದ್ದು ಮಾಡುತ್ತಿದೆ. ವಿಷಯಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಪಕ್ಷದ ಇನ್ನೊಬ್ಬ ಎಮ್ ಎಲ್ ಸಿ ಎನ್ ರವಿಕುಮಾರ್ (N Ravi Kumar), ಬಾಬುರಾವ್ ಕೇವಲ ಪಕ್ಷಕ್ಕೆ ಮಾತ್ರವಲ್ಲ, ಇಡೀ ಕೋಲಿ ಸಮಾಜಕ್ಕೆ ದ್ರೋಹವೆಸಗಿದ್ದಾರೆ ಎಂದು ಹೇಳಿದರು. ಅವರು ಕಾಂಗ್ರೆಸ್ ಸೇರಿದ್ದು ಪಕ್ಷಕ್ಕೆ ದೊಡ್ಡ ಲಾಭವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾವಿಸಿದ್ದಾರೆ. ಆದರೆ, ಬಾಬುರಾವ್ ಮತ್ತು ಖರ್ಗೆಯವರಿಗೆ ಕಲ್ಯಾಣ ಕರ್ನಾಟಕ ಜನತೆ ಪಾಠ ಕಲಿಸಲಿದೆ, ಅವರನ್ನು ಬಿಜೆಪಿ ಎಕ್ಸ್ ಪೋಸ್ ಮಾಡಲಿದೆ ಎಂದು ರವಿಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ