Assembly Polls: ನಾಳೆ ಬಾದಾಮಿಯಲ್ಲಿ ಸಿದ್ದರಾಮಯ್ಯ ರೋಡ್ ಶೋ; ಅಲ್ಲಿಂದಲೇ ಸ್ಪರ್ಧೆ ಅಂತಿಮವೇ?
ಸಿದ್ದರಾಮಯ್ಯ ಶುಕ್ರವಾರ ಬಾದಾಮಿಗೆ ಭೇಟಿ ನೀಡಲಿದ್ದು ಬಾದಾಮಿ-ಕೆರೂರು ಶಾಶ್ವತ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲಿದ್ದಾರೆ
ಬಾಗಲಕೋಟೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ (Siddaramaiah) ಕ್ಷೇತ್ರ ಗೊಂದಲ ಪರಿಹಾರವಾಗಿಲ್ಲ. ಕೋಲಾರ, ವರುಣಾ, ಬಾದಾಮಿ, ಚಾಮುಂಡೇಶ್ವರಿ, ರಾಣೆಬೆನ್ನೂರು-ಹೀಗೆ ಹಲವಾರು ಕ್ಷೇತ್ರಗಳ ಬಗ್ಗೆ ಚರ್ಚೆಯಾಗುತ್ತಿದೆ. ಕೋಲಾರ (Kolar) ರೂಲ್ ಔಟ್ ಆಗುವ ಸಾಧ್ಯತೆ ಹೆಚ್ಚಿರುವುದರಿಂದ ಅವರು ಪುನಃ ಬಾದಾಮಿಯಿಂದಲೇ ಸ್ಪರ್ಧಿಸ ಬಹುದು ಅಂತ ಹೇಳಲಾಗುತ್ತಿದೆ. ಏತನ್ಮಧ್ಯೆ, ಸಿದ್ದರಾಮಯ್ಯ ಶುಕ್ರವಾರ ಬಾದಾಮಿಗೆ (Badami) ಭೇಟಿ ನೀಡಲಿದ್ದು ಬಾದಾಮಿ-ಕೆರೂರು ಶಾಶ್ವತ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಬಳಿಕ ಬಾದಾಮಿಯಲ್ಲಿ ರೋಡ್ ಶೋವೊಂದನ್ನು ನಡೆಸಲಿದ್ದಾರೆ. ಅವರ ಭೇಟಿ ಮತ್ತು ರೋಡ್ ಶೋಗಳಿಗೆ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos