Shruthi: ‘ಕಲಾವಿದರಾಗಿ ಹುಟ್ಟಿದ್ದಕ್ಕೆ ಸಾರ್ಥಕ ಅನಿಸುತ್ತೆ’: ‘ವೀರಂ’ ಟ್ರೇಲರ್ ಬಿಡುಗಡೆ ವೇಳೆ ಶ್ರುತಿ ಮಾತು
Veeram Movie Trailer Launch: ‘ವೀರೇಶ್’ ಚಿತ್ರಮಂದಿರದಲ್ಲಿ ‘ವೀರಂ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಅಲ್ಲಿ ನೆರೆದಿದ್ದ ಅಭಿಮಾನಿಗಳ ಪ್ರೀತಿಗೆ ನಟಿ ಶ್ರುತಿ ಅವರು ಸಲಾಂ ಎಂದಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರುತಿ (Shruthi) ಅವರು ಈಗಲೂ ಸಖತ್ ಬೇಡಿಕೆ ಹೊಂದಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ ‘ವೀರಂ’ ಸಿನಿಮಾದಲ್ಲಿ ಶ್ರುತಿ ಕೂಡ ನಟಿಸಿದ್ದಾರೆ. ಬೆಂಗಳೂರಿನ ‘ವೀರೇಶ್’ ಚಿತ್ರಮಂದಿರದಲ್ಲಿ ಇಂದು (ಮಾರ್ಚ್ 23) ಈ ಸಿನಿಮಾದ ಟ್ರೇಲರ್ (Veeram Movie Trailer) ಬಿಡುಗಡೆ ಮಾಡಲಾಯಿತು. ಮಲ್ಟಿಪ್ಲೆಕ್ಸ್ ಅಥವಾ ಸ್ಟಾರ್ ಹೋಟೆಲ್ಗಳ ಬದಲಿಗೆ ಚಿತ್ರಮಂದಿರದಲ್ಲಿ ಟ್ರೇಲರ್ ರಿಲೀಸ್ ಕಾರ್ಯಕ್ರಮ ಮಾಡಿದ್ದು ಶ್ರುತಿ ಅವರಿಗೆ ಖುಷಿ ನೀಡಿತು. ಅಲ್ಲಿ ನೆರೆದಿದ್ದ ಅಭಿಮಾನಿಗಳನ್ನು ನೋಡಿ ಅವರು ಕೊಂಚ ಎಮೋಷನಲ್ ಆದರು. ‘ಇಲ್ಲಿ ಕಾರ್ಯಕ್ರಮ ಮಾಡಿದ್ದು ನನಗೆ ವಿಶೇಷ ಅನುಭವ. ಸಿನಿಮಾವನ್ನು ಪ್ರೀತಿಸುವ ಜನ ಸೇರಿದ್ದಾರೆ. ಜನರ ಪ್ರೀತಿ, ಶಿಳ್ಳೆ, ಚಪ್ಪಾಳೆ ನೋಡಿದಾಗ ನಾವು ಕಲಾವಿದರಾಗಿ ಹುಟ್ಟಿದ್ದು ಸಾರ್ಥಕ ಆಯಿತು ಎನಿಸುತ್ತದೆ’ ಎಂದು ಶ್ರುತಿ ಹೇಳಿದ್ದಾರೆ. ಏಪ್ರಿಲ್ 7ರಂದು ‘ವೀರಂ’ ಸಿನಿಮಾ (Veeram Movie) ಬಿಡುಗಡೆ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.