CM in Delhi: ಯಾರೆಲ್ಲ ಸಚಿವರು ಸಾರ್ ಅಂತ ಪತ್ರಕರ್ತರು ಕೇಳಿದರೆ ಶಿಳ್ಳೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉತ್ತರ!
ಆದರೆ, ಮುಖ್ಯಮಂತ್ರಿಗಳು ಮಾತ್ರ ರಾಜೇಶ್ ಖನ್ನಾ ಶೈಲಿಯಲ್ಲಿ ಶಿಳ್ಳೆ ಹಾಕುತ್ತಾ, ಪತ್ರಕರ್ತರತ್ತ ಕೈ ಬೀಸಿ ಅಲ್ಲಿಂದ ತೆರಳಿದರು.
ದೆಹಲಿ: ನಗರದ ಎಐಸಿಸಿ ಕಚೇರಿಯಲ್ಲಿ (AICC office) ಕರ್ನಾಟಕ ಸರ್ಕಾರದ ಸಂಪುಟ ವಿಸ್ತರಣೆ ಸರ್ಕಸ್ ಜಾರಿಯಲ್ಲಿದೆ. ಇವತ್ತು ಸಾಯಂಕಾಲದೊಳಗೆ ಉಳಿದ 20-25 ಸಚಿವರ ಹೆಸರುಗಳು ಹೆಸರುಗಳು ಹೊರಬೀಳಲಿವೆ ಅಂತ ಬೆಳಗ್ಗೆ ವದಂತಿ ಹರಡಿತ್ತು, ಅದರೆ ಅದು ಹುಸಿಹೋಗಿದೆ. ಸಚಿವರ ಹೆಸರುಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ಇನ್ನೂ 2-3 ದಿನಗಳ ಕಾಲ ನಡೆಯುವ ಹಾಗೆ ಕಾಣುತ್ತಿದೆ. ಎಐಸಿಸಿ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮೀಟಿಂಗ್ ಗಳನ್ನು ನಡೆಸುತ್ತಲೇ ಇದ್ದಾರೆ. ಅಂಥದೊಂದು ಸಭೆ ಮುಗಿಸಿಕೊಂಡು ಸಿದ್ದರಾಮಯ್ಯ ಹೊರಬಂದಾಗ ಎಂದಿನಂತೆ ಪತ್ರಕರ್ತರು ಅವರನ್ನು ಸುತ್ತುವರಿದು ಯಾರ್ಯಾರ ಹೆಸರು ಅಂತಿಮಗೊಂಡಿದೆ ಅಂತ ಪ್ರಶ್ನಿಸಿದರು. ಆದರೆ, ಮುಖ್ಯಮಂತ್ರಿಗಳು ಮಾತ್ರ ರಾಜೇಶ್ ಖನ್ನಾ ಶೈಲಿಯಲ್ಲಿ ಶಿಳ್ಳೆ ಹಾಕುತ್ತಾ, ಪತ್ರಕರ್ತರತ್ತ ಕೈ ಬೀಸಿ ಅಲ್ಲಿಂದ ತೆರಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ