ತುಮಕೂರು ಖಾಸಗಿ ಕಂಪನಿಯೊಂದರ ಟಾಯ್ಲೆಟ್ ನಲ್ಲಿ ನಾಗರಗಾವು ಪ್ರತ್ಯಕ್ಷ, ಉರಗ ತಜ್ಞರಿಂದ ಸರೀಸೃಪದ ರಕ್ಷಣೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 23, 2022 | 10:21 AM

ನಂತರ ಸ್ಥಳೀಯ ಉರಗ ತಜ್ಞ ದಿಲೀಪ್ ಗೆ ವಿಷಯ ತಿಳಿಸಿದಾಗ ಅವರು ಅಲ್ಲಿಗೆ ಬಂದು, ಉರಗನನ್ನು ಹಿಡಿದು ಸುರಕ್ಷಿತವಾದ ಸ್ಥಳವೊಂದಕ್ಕೆ ಒಯ್ದು ಬಿಟ್ಟಿದ್ದಾರೆ.

ತುಮಕೂರುನಲ್ಲಿರುವ ಖಾಸಗಿ ಕಂಪನಿಯೊಂದರ (private company) ಸಿಬ್ಬಂದಿಗೆ ಬುಧವಾರ ಬೆಳ್ಳಂಬೆಳಿಗ್ಗೆ ನಾಗದರ್ಶನವಾಗಿದೆ. ನಗರದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ (industrial area) ಕಂಪನಿಯ ಶೌಚಾಲಯದಲ್ಲಿ ಭಾರಿಗಾತ್ರದ ನಾಗರಹಾವೊಂದು (cobra) ಪ್ರಾಯಶ: ಕಳೆದ ರಾತ್ರಿ ನುಗ್ಗಿದೆ. ಸಿಬ್ಬಂದಿಯೊಬ್ಬರು ಅದನ್ನು ನೋಡಿ, ಹೆದರಿ ಹೊರಗೋಡಿ ಬಂದಿದ್ದಾರೆ. ನಂತರ ಸ್ಥಳೀಯ ಉರಗ ತಜ್ಞ ದಿಲೀಪ್ ಗೆ ವಿಷಯ ತಿಳಿಸಿದಾಗ ಅವರು ಅಲ್ಲಿಗೆ ಬಂದು, ಉರಗನನ್ನು ಹಿಡಿದು ಸುರಕ್ಷಿತವಾದ ಸ್ಥಳವೊಂದಕ್ಕೆ ಒಯ್ದು ಬಿಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ