ಬಿಗ್ ಬಾಸ್ ಶೋನಿಂದ ಒಳ್ಳೆಯ ಸಂಬಳ ಸಿಕ್ತು: ಸಂಭಾವನೆ ಬಗ್ಗೆ ಬಾಯ್ಬಿಟ್ಟ ಕಾಕ್ರೋಚ್ ಸುಧಿ
ನಟ ಕಾಕ್ರೋಚ್ ಸುಧಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋನಿಂದ ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯಿಂದ ಹೊರಗೆ ಬಂದ ಅವರು ಟಿವಿ9 ಜತೆ ಮಾತಾಡಿದ್ದಾರೆ. ಸುಧಿಗೆ ಒಳ್ಳೆಯ ಸಂಬಳ ಸಿಕ್ಕಿದೆಯಾ? ಆ ಪ್ರಶ್ನೆ ಅವರು ಉತ್ತರ ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
ನಟ ಕಾಕ್ರೋಚ್ ಸುಧಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಿಂದ ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯಿಂದ ಹೊರಬಂದ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಬಿಗ್ ಬಾಸ್ ಶೋ ಒಪ್ಪಿಕೊಳ್ಳುವಾಗ ಕಾಕ್ರೋಚ್ ಸುಧಿ (Cockroach Sudhi) ಅವರ ಕೈತುಂಬ ಸಿನಿಮಾಗಳು ಇದ್ದವು. ಅವುಗಳ ನಡುವೆಯೂ ಅವರು ಬಿಗ್ ಬಾಸ್ ಆಟದಲ್ಲಿ ಸ್ಪರ್ಧಿಸಲು ಹೋದರು. ಹಾಗಾದ್ರೆ ಸುಧಿಗೆ ಒಳ್ಳೆಯ ಸಂಬಳ ಸಿಕ್ಕಿದೆಯಾ? ಆ ಪ್ರಶ್ನೆ ಅವರು ಉತ್ತರ ನೀಡಿದ್ದಾರೆ. ‘ಸಿನಿಮಾಗಳಲ್ಲಿ ನನಗೆ ಚೆನ್ನಾಗಿ ಸಂಭಾವನೆ ಸಿಗುತ್ತಿತ್ತು. ಬಿಗ್ ಬಾಸ್ ಒಂದು ನೋಡಬೇಕು ಎಂಬ ಆಸೆ ನನಗೆ ಇತ್ತು. ಸಂಬಳದ ವಿಚಾರದಲ್ಲಿ ಬಿಗ್ ಬಾಸ್ ಯಾರಿಗೂ ಅನ್ಯಾಯ ಮಾಡಲ್ಲ. ಮನೆಯವರನ್ನೆಲ್ಲ ಬಿಟ್ಟು ನಾವು ಅಲ್ಲಿ ಹೋಗಿ ಕಷ್ಟಪಟ್ಟಿದ್ದಕ್ಕೆ ತುಂಬ ಒಳ್ಳೆಯ ಸಂಬಳ ಕೊಡುತ್ತಾರೆ. ಆದರೆ ಸಂಬಳಕ್ಕೂ ಮೀರಿದ ವಿಚಾರಗಳು ಅಲ್ಲಿ ಚೆನ್ನಾಗಿವೆ’ ಎಂದು ಕಾಕ್ರೋಚ್ ಸುಧಿ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
