ಕಲರ್ಸ್ ಕನ್ನಡಿಗ ಪ್ರಶಸ್ತಿಗೆ ಅರ್ಹರು ಎನಿಸಿದವರ ಹೆಸರು ಸೂಚಿಸೋ ಅವಕಾಶ
ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಕಾರ್ಯಕ್ರಮ ಪ್ರತಿ ವರ್ಷ ನಡೆಯುತ್ತದೆ. ಈ ಬಾರಿಯೂ ಈ ಕಾರ್ಯಕ್ರಮ ನಡೆಯಲು ಸಿದ್ಧತೆ ನಡೆದಿದೆ. ಅದಕ್ಕೂ ಮೊದಲು ಕಲರ್ಸ್ ಕನ್ನಡ ಪ್ರಶಸ್ತಿಗೆ ಅರ್ಹರಾದವರ ಹೆಸರನ್ನು ಸೂಚಿಸಲು ಕಲರ್ಸ್ ವಾಹಿನಿ ಕೋರಿದೆ. ಆ ಬಗ್ಗೆ ಇಲ್ಲಿದೆ ವಿವರ. ಸೂಕ್ತವಾದ ಹೆಸರು ಸೂಚಿಸಲು ಕಲರ್ಸ್ ವಾಹಿನಿ ಕೋರಿದೆ.
ಕಲರ್ಸ್ ಕನ್ನಡ ವಾಹಿನಿಯು ಪ್ರತಿ ವರ್ಷ ಪುನೀತ್ ರಾಜ್ಕುಮಾರ್ ನೆನಪಲ್ಲಿ ‘ಕಲರ್ಸ್ ಕನ್ನಡಿಗ’ ಅವಾರ್ಡ್ ನೀಡುತ್ತಾ ಬರುತ್ತಿದೆ. ಇದರ ಪ್ರಕಾರ ಸಾಕಷ್ಟು ಸಾಧನೆ ಮಾಡಿ ತೆರೆಮರೆಯಲ್ಲಿ ಇರುವವರ ಹೆಸರನ್ನು ಸೂಚಿಸಬೇಕು. ಅದನ್ನು ಪರಿಶೀಲಿಸಿ ಕಲರ್ಸ್ ಕನ್ನಡ ವಾಹಿನಿ ಅವಾರ್ಡ್ ನೀಡುತ್ತದೆ. ‘ನಿಮ್ಮ ದೃಷ್ಟಿಯಲ್ಲಿ ಈ ಪ್ರಶಸ್ತಿಗೆ ಅರ್ಹರಾದವರ ಹೆಸರು, ಸಾಧನೆ ಸಹಿತ ಸಂಪೂರ್ಣ ಮಾಹಿತಿಯನ್ನು ನಮಗೆ ಕಳುಹಿಸಿ.ckcampaign@jiostar.comಗೆ ಈಮೇಲ್ ಮಾಡಿ ಅಥವಾ 9364015184ಕ್ಕೆ ವಾಟ್ಸಾಪ್ ಮಾಡಿ’ ಎಂದು ಕಲರ್ಸ್ ಕನ್ನಡ ವಾಹಿನಿ ಕೋರಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.