ತೆರಿಗೆ ನೋಟಿಸ್ ವಿರುದ್ಧ ಪ್ರತಿಭಟನೆ: ಬೆಂಗಳೂರಿನ ಹಲವು ಬೇಕರಿ, ಕಾಂಡಿಮೆಂಟ್ಸ್​ಗಳು ಬಂದ್

Updated on: Jul 23, 2025 | 12:34 PM

ಬೆಂಗಳೂರಿನ ಹಲವು ಬೇಕರಿ ಮತ್ತು ಕಾಂಡೀಮೆಂಟ್ಸ್‌ಗಳ ಮಾಲೀಕರು ಜುಲೈ 23ರಿಂದ 25ರವರೆಗೆ ಮುಷ್ಕರ ಹಮ್ಮಿಕೊಂಡಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ವಿರೋಧಿಸಿ ವ್ಯಾಪಾರಿಗಳು ಜುಲೈ 25ರಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ. ಕೆಲವೆಡೆ ಹಾಲು, ಮೊಸರು ಮಾರಾಟ ಈಗಲೇ ಸ್ಥಗಿತಗೊಂಡಿದ್ದು, ಬೇಕರಿಗಳು ಮುಚ್ಚಲ್ಪಟ್ಟಿವೆ. ಇದು 25 ರ ವರೆಗೆ ಮುಂದುವರಿಯಲಿದೆ.

ಬೆಂಗಳೂರು, ಜುಲೈ 23: ಬಸವೇಶ್ವರ ನಗರದ ಗಣೇಶ್ ಬೇಕರಿ ಮತ್ತು ಕಾಂಡೀಮೆಂಟ್ಸ್ ಅಂಗಡಿ ಸೇರಿದಂತೆ ಬೆಂಗಳೂರಿನ ವಿವಿಧ ಪ್ರದೇಶಗಳ ಕಾಂಡಿಮೆಂಟ್ಸ್ ಅಂಗಡಿಗಳು ಜುಲೈ 23 ರಂದೇ ಬಂದ್ ಮಾಡಿ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ವಿರುದ್ಧ ಪ್ರತಿಭಟನೆ ಆರಂಭಿಸಿವೆ. ವಾಣಿಜ್ಯ ತೆರಿಗೆ ಹಾಗೂ ಆನ್‌ಲೈನ್ ಪಾವತಿಗೆ ಸಂಬಂಧಿಸಿದ ತೆರಿಗೆ ಸಮಸ್ಯೆಗಳಿಂದಾಗಿ ವ್ಯಾಪಾರಿಗಳು ಮೂರು ದಿನಗಳ ಮುಷ್ಕರಕ್ಕೆ ಮುಂದಾಗಿದ್ದಾರೆ. ಜುಲೈ 25 ರಂದು ಫ್ರೀಡಂ ಪಾರ್ಕ್‌ನಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಯಲಿದೆ. ಸಮಸ್ಯೆಗೆ ಪರಿಹಾರ ದೊರೆಯುವವರೆಗೆ ಮುಷ್ಕರ ಮುಂದುವರಿಸುವುದಾಗಿ ಅಂಗಡಿ ಮಾಲೀಕರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 23, 2025 12:33 PM