ಕೊಪ್ಪಳ: ಕನ್ನಡ ಬರಲ್ಲ, ಹಿಂದಿ-ತೆಲುಗು ಮಾತ್ರ ಎಂದ ಬ್ಯಾಂಕ್ ಅಧಿಕಾರಿ
ಗಂಗಾವತಿಯ ಕೆನರಾ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಬ್ಬ ಅಧಿಕಾರಿ ಕನ್ನಡ ಭಾಷೆಯನ್ನು ಬಳಸಲು ನಿರಾಕರಿಸಿ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಮಾತ್ರ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನ್ನಡ ತಿಳಿಯದವರಿಂದ ಬ್ಯಾಂಕ್ ಸೇವೆಗಳನ್ನು ಹೇಗೆ ಪಡೆಯುವುದು ಎಂದು ಪ್ರಶ್ನೆ ಮಾಡಿದ್ದಾರೆ.
ಕೊಪ್ಪಳ, ಜುಲೈ 23: ಜಿಲ್ಲೆಯ ಗಂಗಾವತಿಯಲ್ಲಿರುವ ಕೆನರಾ ಬ್ಯಾಂಕ್ ಬ್ರ್ಯಾಂಚ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಬ್ಬ ಅಧಿಕಾರಿ ಕನ್ನಡ (kannada) ಭಾಷೆಯನ್ನು ಬಳಸಲು ನಿರಾಕರಿಸಿ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಮಾತ್ರ ಮಾತನಾಡುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಈ ಕುರಿತು ವಿಡಿಯೋ ಕೂಡ ವೈರಲ್ ಆಗಿದೆ. ಬರೀ ಹಿಂದಿ, ತೆಲುಗು ಅಂದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Jul 23, 2025 12:22 PM
Latest Videos
