ವಿಚಾರಣಾಧೀನ ಕೈದಿಗಳಿಗೆ ಕಂಪ್ಯೂಟರ್ ತರಬೇತಿ: ಇನ್ಫೋಸಿಸ್, ಜಿಲ್ಲಾಡಳಿತದಿಂದ ನೂತನ ಪ್ರಯತ್ನ
ಚಾಮರಾಜನಗರ ಜಿಲ್ಲಾಡಳಿತದ ಸಹಾಯದೊಂದಿಗೆ ಇನ್ಪೋಸಿಸ್ ರೋಟರಿ ಕಡೆಯಿಂದ ಆಸಕ್ತಿಯುಳ್ಳ ಯುವ ವಿಚಾರಣಾಧೀನ ಕೈದಿಗಳಿಗೆ ಶಿಕ್ಷಣ, ಟ್ಯಾಲಿ, ಎಕ್ಸ್ ಎಲ್, ಡಾಟಾ ಎಂಟ್ರಿ ಸೇರಿ ವಿವಿಧ ಬಗೆಯ ಶಿಕ್ಷಣ ಹೇಳಿ ಕೊಡಲಾಗುತ್ತಿದೆ. ಕಾರಾಗೃಹದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ತರಬೇತಿ ನೀಡಲಾಗಿದೆ. ಬಿಡುಗಡೆ ಬಳಿಕ ಅಪರಾಧ ಕೃತ್ಯದಲ್ಲಿ ಭಾಗಿಯಾಗದೆ ಸ್ವಾವಲಂಭಿಯಾಗಿ ಬದುಕಲು ಇದು ಸಹಾಯಕವಾಗಿದೆ.
ಚಾಮರಾಜನಗರ, ಜೂನ್ 23: ಚಾಮರಾಜನಗರದ (Chamarajanagar) ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಕಂಪ್ಯೂಟರ್ ತರಬೇತಿ ನೀಡಲಾಗಿದೆ. ಆ ಮೂಲಕ ಇನ್ಫೋಸಿಸ್ ಹಾಗೂ ಜಿಲ್ಲಾಡಳಿತ ಜೈಲಿನಿಂದ ಬಿಡುಗಡೆ ಆದವರಿಗೆ ಹೊಸ ಜೀವನದ ಪಾಠ ಹೇಳಿಕೊಟ್ಟಿದೆ. ವಿವಿಧ ಅಪರಾಧಗಳಲ್ಲಿ ನೂರಾರು ಮಂದಿ ಭಾಗಿಯಾಗಿ ಜೈಲು ಸೇರಿದ್ದರು. ಆಸಕ್ತಿಯುಳ್ಳ ಯುವ ವಿಚಾರಣಾಧೀನ ಕೈದಿಗಳಿಗೆ ಚಾಮರಾಜನಗರ ಜಿಲ್ಲಾಡಳಿತದ ಸಹಾಯದೊಂದಿಗೆ ಇನ್ಪೋಸಿಸ್ ರೋಟರಿ ಕಡೆಯಿಂದ ಶಿಕ್ಷಣ, ಟ್ಯಾಲಿ, ಎಕ್ಸ್ ಎಲ್, ಡಾಟಾ ಎಂಟ್ರಿ ಸೇರಿ ವಿವಿಧ ಬಗೆಯ ಶಿಕ್ಷಣ ಹೇಳಿ ಕೊಡಲಾಗುತ್ತಿದೆ. ಕಾರಾಗೃಹದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಆಫ್ ಲೈನ್, ಆನ್ ಲೈನ್ ಕ್ಲಾಸಸ್ ಮಾಡಲಾಗಿದೆ. ಬಿಡುಗಡೆ ಬಳಿಕ ಅಪರಾಧ ಕೃತ್ಯದಲ್ಲಿ ಭಾಗಿಯಾಗದೆ ಸ್ವಾವಲಂಭಿಯಾಗಿ ಬದುಕಲು ಇದು ಸಹಾಯಕವಾಗಿದೆ. ಈ ಹಿನ್ನಲೆ ಕಾರಾಗೃಹದಲ್ಲಿರುವ ಕೈದಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲಾಗಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jun 23, 2024 03:32 PM