ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು ಹಿಗೆ

Edited By:

Updated on: Mar 15, 2025 | 12:57 PM

ಬೆಂಗಳೂರಿನ ನೆಲಮಂಗಲದಲ್ಲಿ ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಭೀಕರ ಅಪಘಾತವನ್ನು ನೆನಪಿಸುವಂಥ ರೀತಿಯಲ್ಲಿ ಬೆಳಗಾವಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಕಾರಿನ ಮೇಲೆ ಕಾಂಕ್ರಿಟ್‌ ಮಿಕ್ಸರ್‌ ಲಾರಿ ಉರುಳಿಬಿದ್ದಿದೆ. ಬೆಂಗಳೂರು-ಪುಣೆ ಹೈವೇನಲ್ಲಿ ಕಾಂಕ್ರಿಟ್‌ ಮಿಕ್ಸರ್‌ ಲಾರಿ ಮುಗುಚಿ ಬಿದ್ದು, ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದರೂ ಸಹ ಒಳಗೆ ಇದ್ದ ಇಬ್ಬರು ಪವಾಡಸದೃಶ್ಯವಾಗಿ ಪಾರಾಗಿದ್ದಾರೆ. ಇನ್ನು ಅಪಘಾತದ ಭೀಕರ ಹೇಗಿತ್ತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

ಬೆಳಗಾವಿ, (ಮಾರ್ಚ್​ 15): ಬೆಂಗಳೂರಿನ ನೆಲಮಂಗಲದಲ್ಲಿ ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಭೀಕರ ಅಪಘಾತವನ್ನು ನೆನಪಿಸುವಂಥ ರೀತಿಯಲ್ಲಿ ಬೆಳಗಾವಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಕಾರಿನ ಮೇಲೆ ಕಾಂಕ್ರಿಟ್‌ ಮಿಕ್ಸರ್‌ ಲಾರಿ ಉರುಳಿಬಿದ್ದಿದೆ. ಬೆಂಗಳೂರು-ಪುಣೆ ಹೈವೇನಲ್ಲಿ ಕಾಂಕ್ರಿಟ್‌ ಮಿಕ್ಸರ್‌ ಲಾರಿ ಮುಗುಚಿ ಬಿದ್ದು, ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದರೂ ಸಹ ಒಳಗೆ ಇದ್ದ ಇಬ್ಬರು ಪವಾಡಸದೃಶ್ಯವಾಗಿ ಪಾರಾಗಿದ್ದಾರೆ. ಕಾರಿ ಸ್ಥಿತಿ ನೀಡಿದರೆ ಇಬ್ಬರೂ ಕಾರಿನ ಜೊತೆ ಅಪ್ಪಚ್ಚಿಯಾಗಬೇಕು. ಅದೃಷ್ಟವಶಾತ್​ ಆ ರೀತಿ ಏನು ಆಗಿಲ್ಲ. ಇನ್ನು ಭಯಾನಕ ಅಪಘಾತ ಡ್ರೋನ್​ ಕ್ಯಾಮರಾದಲ್ಲಿ ಕಂಡಿದ್ದು ಹೀಗೆ.

ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಮೇಲೆ ಮುಗುಚಿ ಬಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿ, ಕಾರು ಅಪ್ಪಚ್ಚಿ..!

Loading...
Unable to load recommendations.
Follow Us
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More