ಹಿಂದೆ ಭಾರತವನ್ನು ಒಡೆದವರು ಈಗ ಜೋಡಿಸುವ ಪ್ರಯತ್ನ ಮಾಡುತ್ತಿದ್ದಾರೆ!: ಕೆ ಎಸ್ ಈಶ್ವರಪ್ಪ
ಈಶ್ವರಪ್ಪನವರು, ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಭಾರತವನ್ನು ಇಬ್ಭಾಗ ಮಾಡಿದ್ದ ಕಾಂಗ್ರೆಸ್ ಈಗ ಅದನ್ನು ಜೋಡಿಸುವ ಪ್ರಯತ್ನಕ್ಕಿಳಿದಿರುವುದು ಸಂತೋಷದ ಸಂಗತಿ ಅಂತ ವ್ಯಂಗ್ಯವಾಗಿ ಹೇಳಿದರು.
ಶಿವಮೊಗ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ನೇತೃತ್ವದಲ್ಲಿ ಬುಧವಾರದಿಂದ ಆರಂಭಗೊಂಡಿರುವ ಭಾರತ್ ಜೋಡೋ (Bharat Jodo) ಯಾತ್ರೆಯನ್ನು ಬಿಜೆಪಿ ಶಾಸಕ ಕೆ ಎಸ್ ಈಶ್ವರಪ್ಪ (KS Eshwarappa) ಲೇವಡಿ ಮಾಡಿದ್ದಾರೆ. ಗುರುವಾರ ಶಿವಮೊಗ್ಗದಲ್ಲಿ ಮಾದ್ಯಮದವರೊಂದಿಗೆ ಮಾತಾಡಿದ ಈಶ್ವರಪ್ಪನವರು, ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಭಾರತವನ್ನು ಇಬ್ಭಾಗ ಮಾಡಿದ್ದ ಕಾಂಗ್ರೆಸ್ ಈಗ ಅದನ್ನು ಜೋಡಿಸುವ ಪ್ರಯತ್ನಕ್ಕಿಳಿದಿರುವುದು ಸಂತೋಷದ ಸಂಗತಿ ಅಂತ ವ್ಯಂಗ್ಯವಾಗಿ ಹೇಳಿದರು.