ಅಖಿಲಾ ಕುಟುಂಬಕ್ಕೆ ಇನ್ನೂ ಯಾಕೆ ಪರಿಹಾರ ನೀಡಿಲ್ಲ ಅಂತ ಪಾಲಿಕೆ ಕಮೀಶನರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು

ಅಖಿಲಾ ಕುಟುಂಬಕ್ಕೆ ಇನ್ನೂ ಯಾಕೆ ಪರಿಹಾರ ನೀಡಿಲ್ಲ ಅಂತ ಪಾಲಿಕೆ ಕಮೀಶನರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 08, 2022 | 3:37 PM

ಕುಟುಂಬದವರರು ಬಿಬಿಎಮ್ ಪಿ ಯಿಂದ ಇದುವರೆಗೆ ಪರಿಹಾರ ಸಿಗದಿರುವುದನ್ನು ಸಿದ್ದರಾಮಯ್ಯನವರ ಗಮನಕ್ಕೆ ತಂದಾಗ ಅವರು ಪಾಲಿಕೆ ಕಮೀಶನರ್ ಗೆ ಫೋನ್ ಮಾಡಿ ತ್ವರಿತವಾಗಿ ಪರಿಹಾರ ನೀಡುವಂತೆ ತಾಕೀತು ಮಾಡಿದರು.

ಬೆಂಗಳೂರು:  ಮಹದೇವಪುರ ವಿಧಾನ ಸಭಾ ಕ್ಷೇತ್ರದ ವ್ಹೈಟ್ ಫೀಲ್ಡ್ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಸಿದ್ದಾಪುರದಲ್ಲಿ ಸೆಪ್ಟೆಂಬರ್ 5ರಂದು 23-ವರ್ಷ ವಯಸ್ಸಿನ ಅಖಿಲಾ (Akhila) ಹೆಸರಿನ ಯುವತಿ ವಿದ್ಯುತ್ ತಗುಲಿ ದಾರುಣ ಸಾವನ್ನಪ್ಪಿದ್ದು (electrocuted) ಎಲ್ಲರಿಗೂ ಗೊತ್ತಿರುವ ವಿಷಯವೇ. ಗುರುವಾರದಂದು ನಗರದಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅಖಿಲಾ ಅವರ ಮನೆಗೂ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡಿದರು. ಕುಟುಂಬದವರರು ಬಿಬಿಎಮ್ ಪಿ ಯಿಂದ ಇದುವರೆಗೆ ಪರಿಹಾರ ಸಿಗದಿರುವುದನ್ನು ಸಿದ್ದರಾಮಯ್ಯನವರ ಗಮನಕ್ಕೆ ತಂದಾಗ ಅವರು ಪಾಲಿಕೆ ಕಮೀಶನರ್ ಗೆ ಫೋನ್ ಮಾಡಿ ತ್ವರಿತವಾಗಿ ಪರಿಹಾರ ನೀಡುವಂತೆ ತಾಕೀತು ಮಾಡಿದರು.