Bigg Boss Kannada OTT: ಜಶ್ವಂತ್​ ಬಿಟ್ಟು ಗುರೂಜಿ ಜೊತೆ ಶುರುವಾಯ್ತು ನಂದಿನಿ ಸುತ್ತಾಟ

Bigg Boss Kannada OTT: ಜಶ್ವಂತ್​ ಬಿಟ್ಟು ಗುರೂಜಿ ಜೊತೆ ಶುರುವಾಯ್ತು ನಂದಿನಿ ಸುತ್ತಾಟ

TV9 Web
| Updated By: ಮದನ್​ ಕುಮಾರ್​

Updated on:Sep 08, 2022 | 9:16 AM

Nandini | Jashwanth Bopanna: ಇಂಥ ಹಲವು ಕ್ಷಣಗಳಿಗೆ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋ ಸಾಕ್ಷಿ ಆಗುತ್ತಿದೆ. ಈಗ 5ನೇ ವಾರ ನಡೆಯುತ್ತಿದ್ದು, 6ನೇ ವಾರಕ್ಕೆ ಫಿನಾಲೆ ಜರುಗಲಿದೆ.

ಜಶ್ವಂತ್ ಬೋಪಣ್ಣ​ ಮತ್ತು ನಂದಿನಿ (Nandini) ಪ್ರೇಮಿಗಳು. ಆದರೆ ಬಿಗ್​ ಬಾಸ್​ನಲ್ಲಿ ಅವರು ಪ್ರತ್ಯೇಕ ಸ್ಪರ್ಧಿಗಳಾಗಿ ಆಟ ಆಡಬೇಕು. ಹಾಗಂತ ತಮ್ಮಿಬ್ಬರ ನಡುವಿನ ಪ್ರೀತಿಯನ್ನೂ ಕಳೆದುಕೊಳ್ಳುವಂತಿಲ್ಲ. ದಿನ ಕಳೆದಂತೆಲ್ಲ ಇಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ವೈಮನಸ್ಸು ಮೂಡುತ್ತಿದೆ. ಅದೇ ಕಾರಣಕ್ಕೋ ಏನೋ ಜಶ್ವಂತ್ ಅವರನ್ನು ಬಿಟ್ಟು ಆರ್ಯವರ್ಧನ್​ ಗುರೂಜಿ (Aryavardhan Guruji) ಜತೆ ನಂದಿನಿ ಕಾಲ ಕಳೆದಿದ್ದಾರೆ. ನಂದಿನಿ ಮತ್ತು ಗುರೂಜಿ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ತಿರುಗಾಡಿದ್ದಾರೆ. ಇಂಥ ಹಲವು ಕ್ಷಣಗಳಿಗೆ ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋ ಸಾಕ್ಷಿ ಆಗುತ್ತಿದೆ. ಈಗ ಐದನೇ ವಾರ ನಡೆಯುತ್ತಿದೆ. ಆರನೇ ವಾರಕ್ಕೆ ಫಿನಾಲೆ ಜರುಗಲಿದೆ. ವೂಟ್​ ಸೆಲೆಕ್ಟ್​ ಒಟಿಟಿ ಮೂಲಕ ಈ ಶೋ ಪ್ರಸಾರ ಆಗುತ್ತಿದೆ.

 

 

Published on: Sep 08, 2022 09:16 AM