ಮಕ್ಕಳ ಮಿಠಾಯಿ ಮೇಲೂ ಕಾಂಗ್ರೆಸ್ ಶೇ. 21ರಷ್ಟು ತೆರಿಗೆ ಹಾಕಿತ್ತು; ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಜಿಎಸ್ಟಿ ಸುಧಾರಣೆ ಕುರಿತು ಇಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷದ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಈ ಸುಧಾರಣೆಗಳನ್ನು ಕಾಂಗ್ರೆಸ್ ಟೀಕಿಸಿದೆ. 8 ವರ್ಷಗಳವರೆಗೆ ಇದಕ್ಕೆ ಕಾಯಬೇಕಿತ್ತಾ? ಎಂದು ವಿಪಕ್ಷಗಳು ಪ್ರಶ್ನಿಸಿದ್ದವು. "ನಾನು 2014ರಲ್ಲಿ ಅಧಿಕಾರಕ್ಕೆ ಬರುವ ಮೊದಲು, ಅದು ಅಡುಗೆ ಪಾತ್ರೆಗಳಾಗಲಿ ಅಥವಾ ಕೃಷಿ ವಸ್ತುಗಳಾಗಲಿ, ಔಷಧಿಗಳಾಗಲಿ, ಜೀವ ವಿಮೆಯಾಗಲಿ ಕಾಂಗ್ರೆಸ್ ಸರ್ಕಾರವು ಅಂತಹ ವಿವಿಧ ವಸ್ತುಗಳ ಮೇಲೆ ವಿಭಿನ್ನ ತೆರಿಗೆಗಳನ್ನು ಹಾಕಿತ್ತು" ಎಂದು ಅವರು ಹೇಳಿದ್ದಾರೆ.
ನವದೆಹಲಿ, ಸೆಪ್ಟೆಂಬರ್ 4: ಮಧ್ಯಮ ವರ್ಗಕ್ಕೆ ಅನುಕೂಲವಾಗಲೆಂದು ಜಿಎಸ್ಟಿ ಸುಧಾರಣೆ (GST Reforms) ಜಾರಿಗೆ ತಂದಿದ್ದರೂ ಅದಕ್ಕೂ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕೊಂಕು ತೆಗೆಯುತ್ತಿವೆ ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮಕ್ಕಳ ಮಿಠಾಯಿ ಮೇಲೂ ತೆರಿಗೆ ವಿಧಿಸಿತ್ತು ಎಂದಿದ್ದಾರೆ. ಭಾರತದಲ್ಲಿ 2014ಕ್ಕಿಂತ ಮೊದಲು 100 ರೂ.ಗೆ 14 ರೂ. ತೆರಿಗೆ ಇತ್ತು. ಸೈಕಲ್ ಮೇಲೂ ಶೇ.17ರಷ್ಟು ಕಾಂಗ್ರೆಸ್ ತೆರಿಗೆ ಹಾಕಿತ್ತು. UPA ಅವಧಿಯಲ್ಲಿ ಟೂತ್‌ಪೇಸ್ಟ್, ಹೇರ್ ಆಯಿಲ್‌ಗೆ ಶೇ.27ರಷ್ಟು ತೆರಿಗೆ ಇತ್ತು. ಆಗ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿತ್ತು ಎಂದಿದ್ದಾರೆ. “ನಾನು 2014ರಲ್ಲಿ ಅಧಿಕಾರಕ್ಕೆ ಬರುವ ಮೊದಲು, ಅದು ಅಡುಗೆ ಪಾತ್ರೆಗಳಾಗಲಿ ಅಥವಾ ಕೃಷಿ ವಸ್ತುಗಳಾಗಲಿ, ಔಷಧಿಗಳಾಗಲಿ ಅಥವಾ ಜೀವ ವಿಮೆಯಾಗಲಿ, ಕಾಂಗ್ರೆಸ್ ಸರ್ಕಾರವು ವಿವಿಧ ವಸ್ತುಗಳ ಮೇಲೆ ವಿಭಿನ್ನ ತೆರಿಗೆಗಳನ್ನು ವಿಧಿಸುತ್ತಿತ್ತು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಯುಪಿಎ ಸರ್ಕಾರ ಮಾಡಿದಂತೆ ನಾವು ಕೂಡ ಹೆಚ್ಚಿನ ತೆರಿಗೆ ಹಾಕಿದ್ದರೆ ಅವರು ನಮ್ಮ ತಲೆಕೂದಲು ಹಿಡಿದು ಜಗ್ಗಾಡುತ್ತಿದ್ದರು. 2014ಕ್ಕಿಂತ ಮೊದಲು ರೈತರ ಜಮೀನು ಹೆಚ್ಚು ದುಬಾರಿಯಾಗಿತ್ತು ಮತ್ತು ಲಾಭವು ತುಂಬಾ ಕಡಿಮೆಯಾಗಿತ್ತು. ಅದಕ್ಕೆ ಕಾರಣವೆಂದರೆ ಕಾಂಗ್ರೆಸ್ ಸರ್ಕಾರವು ಕೃಷಿ ಸರಕುಗಳ ಮೇಲೆ ಬಹಳಷ್ಟು ತೆರಿಗೆಯನ್ನು ಸಂಗ್ರಹಿಸುತ್ತಿತ್ತು” ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ. ರಾಷ್ಟ್ರ ರಾಜಧಾನಿಯ 7LKM ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಆಗಿನ ಕಾಂಗ್ರೆಸ್ ಸರ್ಕಾರವು ಮಕ್ಕಳ ಮಿಠಾಯಿಗಳ ಮೇಲೂ 21% ತೆರಿಗೆ ವಿಧಿಸುತ್ತಿದ್ದಂತೆ ಜನರ ಮೇಲೆ ಹೆಚ್ಚಿನ ತೆರಿಗೆಗಳನ್ನು ಹೇರುತ್ತಿತ್ತು ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ