Bengaluru Stampede: ವಿವರಣೆ ಕೇಳಲು ಸಿಎಂ, ಡಿಸಿಎಂರನ್ನು ದೆಹಲಿಗೆ ಕರೆಸಿದ ಕಾಂಗ್ರೆಸ್ ಹೈಕಮಾಂಡ್
ಆರ್ಸಿಬಿ ರಾಜ್ಯದ ಅಥವಾ ದೇಶದ ಒಂದು ತಂಡವಲ್ಲ, ಖಾಸಗಿ ಸಂಸ್ಥೆಯೊಂದರ ಕ್ಲಬ್ ಅದು. ಕ್ಲಬ್ ಬಗ್ಗೆ ಅಭಿಮಾನ ಮತ್ತು ಪ್ರೀತಿಯನ್ನು ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸೇರಿದಂತೆ ಯಾರೂ ಬೇಕಾದರೂ ಇಟ್ಟುಕೊಳ್ಳಬಹುದು. ಅದರೆ ಸರ್ಕಾರೀ ಖರ್ಚಿನಲ್ಲಿ ಆರ್ಸಿಬಿ ತಂಡದ ಆಟಗಾರರಿಗೆ ಸನ್ಮಾನ ಇಟ್ಟುಕೊಳ್ಳೋದು, ಅದರಲ್ಲಿ ಭಾಗಿಯಾಗೋದು ಸರಿಯಲ್ಲ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ.
ಬೆಂಗಳೂರು, ಜೂನ್ 10: ಬೆಂಗಳೂರು ಕಾಲ್ತುಳಿತ ಪ್ರಕರಣ ಕರ್ನಾಟಕದ ನಾಯಕರಿಗೆ ಬೆಂಬಿಡದ ಭೂತವೆಂದರೆ ತಪ್ಪಲ್ಲ. ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಅದು ಬಹಳ ದಿನಗಳವರೆಗೆ ಕಾಡಲಿದೆ. ವಿರೋಧ ಪಕ್ಷಗಳು ಸರ್ಕಾರವನ್ನು ಪ್ರತಿದಿನ ಇಕ್ಕಟ್ಟಿಗೆ ಸಿಕ್ಕಿಸುತ್ತಿವೆ ಅದು ಬೇರೆ ಪ್ರಶ್ನೆ, ಪಕ್ಷದ ಹೈಕಮಾಂಡ್ ಸಹ ಘಟನೆಯ ಬಗ್ಗೆ ಉಗ್ರರೂಪ ತಳೆದಿದೆ ಮತ್ತು ವಿವರಣೆಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ (Siddaramaiah and DK Shivakumar) ಅವರನ್ನು ದೆಹಲಿಗೆ ಕರೆಸಿದೆ. ಇಂದು ಬೆಳಗ್ಗೆ ಅವರಿಬ್ಬರೂ ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದರು.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ದುರಂತದ ವರದಿ ನೀಡುವಂತೆ ಜಸ್ಟೀಸ್ ಕುನ್ಹಾ ಆಯೋಗಕ್ಕೆ ಸರ್ಕಾರ ಸೂಚನೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Loading...
Unable to load recommendations.
Follow Us