ರಮೇಶ್ ಜಾರಕಿಹೊಳಿ ಕಾಮೆಂಟ್ ಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

TV9 Digital Desk

| Edited By: Arun Kumar Belly

Updated on: Nov 24, 2021 | 11:26 PM

ರಮೇಶ್ ಜಾರಕಿಹೊಳಿ ಅವರು ಮಾಡಿದ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಲಕ್ಷ್ಮಿ ಅವರು, ಅದಕ್ಕೆ ಸಂಬಂಧಿಸಿದಂತೆ ಪಕ್ಷದ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ, ತಮಗೆ ಅದೇ ವಿಷಯ ಕುರಿತು ಮಾತಾಡುವುದು ಇಷ್ಟವಿಲ್ಲ, ಎಂದು ಹೇಳಿದರು

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿರವೀಂದ್ರ ಹೆಬ್ಬಾಳ್ಕರ್ ಅವರು ಈಗ ಅವರು ಪ್ರಬುದ್ಧ ರಾಜಕಾರಣಿ ಅಂತ ನಿಸ್ಸಂದೇಹವಾಗಿ ಹೇಳಬಹುದು. ಈ ವಿಡಿಯೋನಲ್ಲಿ ಅವರು ಟಿವಿ9 ವರದಿಗಾರನೊಂದಿಗೆ ಮಾತಾಡುತ್ತಿರುವುದನ್ನು ಕೇಳಿದರೆ ನಿಮ್ಮಲ್ಲೂ ಅದೇ ಭಾವನೆ ಮೂಡುತ್ತದೆ. ಹಿಂದೆ ಅವರ ಪಕ್ಷದವರೇ ಆಗಿದ್ದ ಶಾಸಕ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಅವರ ಕೋಳಿ ಜಗಳ ಎಲ್ಲರಿಗೂ ಗೊತ್ತಿರುವ ವಿಷಯವೇ. ಅವರ ಬಗ್ಗೆ ಇವರು ಕಾಮೆಂಟ್ ಮಾಡೋದು ಇವರು ಅವರ ಬಗ್ಗೆ ಏನೋ ಹೇಳೋದು ಬಹಳ ದಿನಗಳಿಂದ ನಡೆದು ಬರುತ್ತಿದೆ. ಸ್ಲೀಜ್ ವಿಡಿಯೊ ಹೊರಬಿದ್ದ ನಂತರ ಹೇಳಿಕೆ ನೀಡುವುದನ್ನು ಕಡಿಮೆ ಮಾಡಿದ್ದ ರಮೇಶ್ ಈಗ ವಿಧಾನ ಪರಿಷತ್​ಗೆ ನಡೆಯುತ್ತಿರುವ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರ ಬಗ್ಗೆ ಮಾತಾಡಲಾರಂಭಿಸಿದ್ದಾರೆ.

ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ಎಚ್ಚರಿಕೆಯಿಂದ ತಮ್ಮ ಮಾತುಗಳನ್ನು ಆಡುತ್ತಿದ್ದಾರೆ. ಮಂಗಳವಾರದಂದು ರಮೇಶ್ ಜಾರಕಿಹೊಳಿ ಅವರು ಮಾಡಿದ ಟೀಕೆಗಳ ಬಗ್ಗೆ ಅವರ ಪ್ರತಿಕ್ರಿಯೆ ಕೇಳಿದಾಗ ಲಕ್ಷ್ಮಿ ಅವರು, ಅದಕ್ಕೆ ಸಂಬಂಧಿಸಿದಂತೆ ಪಕ್ಷದ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ, ತಮಗೆ ಅದೇ ವಿಷಯ ಕುರಿತು ಮಾತಾಡುವುದು ಇಷ್ಟವಿಲ್ಲ, ಎಂದು ಹೇಳಿ ತಮ್ಮ ಪ್ರಚಾರ ಕಾರ್ಯ ಹೇಗೆ ನಡೆಯುತ್ತಿದೆ ಅನ್ನೋದನ್ನು ವಿವರಿಸುತ್ತಾರೆ.

ವರದಿಗಾರರು ಮತ್ತೊಮ್ಮೆ ಅದೇ ವಿಷಯವನ್ನು ಕೆದಕಿದಾಗಲೂ ಲಕ್ಷ್ಮಿ ಅವರು, ಯಾವುದೇ ರೀತಿಯ ಅಸಮಾಧಾನ ವ್ಯಕ್ತಪಡಿಸದೆ, ಬೇಸರವೂ ತೋರದೆ ಮುಗುಳ್ನಗುತ್ತಲೇ, ತಾವೀಗ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದು, ಬೇರೆಯವರು ಏನು ಹೇಳಿದ್ದಾರೆ, ಏನು ಮಾಡುತ್ತಿದ್ದಾರೆ ಅನ್ನೋದನ್ನು ಕೇಳಿಸಿಕೊಳ್ಳುವಷ್ಟು ಆಥವಾ ಅದರ ಕಡೆ ಹಮನ ಹರಿಸುವಷ್ಟು ವ್ಯವಧಾನ ಹಾಗೂ ಪುರುಸೊತ್ತಿಲ್ಲ, ಎಂದು ನಿರ್ವಿಕಾರ ಭಾವದಿಂದ ಹೇಳಿದರು.

ಇದನ್ನೂ ಓದಿ:   ಬಿಜೆಪಿ ಗರ್ಭಗುಡಿಯಲ್ಲಿ ರಮೇಶ್​ ಜಾರಕಿಹೊಳಿ ಇರೋದು ಕಷ್ಟ; ಕಾಂಗ್ರೆಸ್​ನಲ್ಲಿ 8-10 ಜನರಿಗೆ ಮುಖ್ಯಮಂತ್ರಿ ಆಗೋ ಯೋಗ್ಯತೆ ಇದೆ: ಕೈ ಶಾಸಕ

Related Video

Follow us on

Click on your DTH Provider to Add TV9 Kannada